ಜಾನಪದ ಸಂಶೋಧಕ ಪ್ರೋ. ಜ್ಯೋತಿ ಹೊಸರ ನೆನಪು ಮಾತ್ರ
e-ಸುದ್ದಿ ಬೆಳಗಾವಿ
ಖ್ಯಾತ ಸಾಹಿತಿಗಳು ಹಾಗೂ ಜಾನಪದ ಸಂಶೋಧಕರು ಆದ ಪ್ರೋ. ಜ್ಯೋತಿ ಹೊಸರ ಅವರು ಇಂದು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಜ್ಯೋತಿ ಹೊಸೂರ ಅವರು ಜಾನಪದ ಕ್ಷೇತ್ರದಲ್ಲಿ ಬಹು ದೊಡ್ಡ ಹೆಸರು ‘ಗಾದೆ, ಒಡಪು, ಗ್ರಾಮದೇವತೆ ‘ಅವರು ಮಾಡಿದ ಸಂಶೋಧನೆಗಳು ವಿದ್ವತ್ ಪ್ರಪಂಚದಲ್ಲಿ ಗೌರವ ಆದರಕ್ಕೆ ಪಾತ್ರವಾಗಿದ್ದವು. ರಾಯಭಾಗಿನಂತಹ ಸಣ್ಣ ಹಳ್ಳಿಯಲ್ಲಿದ್ದರು. ಅವರು ನಡೆಸಿದ ಸಂಶೋಧನೆಗಳು ವಿಶ್ವವಿಧ್ಯಾಲಯ ಮಟ್ಟದಲ್ಲಿ ಚರ್ಚೆ ಆಗುತ್ತಿದ್ದವು.
ಶಂಬಾ ಜೋಶಿಯವರ ಸಂಶೋಧನೆಯ ಬಗ್ಗೆ ವಿಶೇಷ ಅಧ್ಯಯನ ಮಾಡಿದ ಜ್ಯೋತಿ ಹೊಸೂರ ಅವರು ಕಾಲಗತಿ ಪ್ರಕಾಶನ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಆ ಮೂಲಕ ಶಂಬಾ ಜೋಶಿಯವರ ಸಮಗ್ರ ಸಾಹಿತ್ಯ ವನ್ನು ಪ್ರಕಟಿಸಿದ್ದರು.
ಸಂಗೊಳ್ಳಿ ರಾಯಣ್ಣ ಕಿತ್ತೂರು ಚನ್ನಮ ‘ಕನಕದಾಸ, ವಚನ ಸಾಹಿತ್ಯ ಕುರಿತು ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನಕಶ್ರೀ ಪ್ರಶಸ್ತಿ’ ಬೆಟ್ಟಗೇರಿ ಕೃಷ್ಣ ಶರ್ಮಾ ಸಂಶೋಧಕ ಪ್ರಶಸ್ತಿ ಮತ್ತು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅವರು ಪತ್ನಿ, ಮಗ, ಹಾಗೂ ಮಗಳನ್ನು ಅಗಲಿದ್ದಾರೆ.
ಕೇಂದ್ರ ಸಾಹಿತ್ಯ ಅಕಾಡಮಿ ಸದಸ್ಯರಾದ ಡಾ.ಸರಜೂ ಕಾಟ್ಕರ ‘ಬೆಳಗಾಡಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಮೆಟಗುಡ್ಡ ಶ್ರೀ ಮೋಹನ ಪಾಟೀಲ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಡಾ ರಾಮಕೃಷ್ಣ ಮರಾಠೆ’ ಹಾಗೂ ಪದಾಧಿಕಾರಿಗಳಾದ ಎಂವೈ ಮೆನಸಿಕಾಯಿ, ಸಿ.ಎಂ ಬೂದಿಹಾಳ ಎ.ಎ ಸನದಿ 1 ಬಿ ಎಫ್ ಕಲ್ಲನ್ನವರ ಡಾ. ಎ ಎಲ್ ಪಾಟೀಲ, ಡಾ ಬಿಜೆಧಾರವಾಡ ಮುಂತಾದವರು ಅಂತಿಮ ನಮನ ಸಲ್ಲಿಸಿದರು.