🪔🪔 *ದೀಪ* 🪔🪔🪔
ದೀಪ
ನಿನಗೆ ಯಾರ ಶಾಪ..?
ಹೊತ್ತಿ ಉರಿದು
ಬೆಳಕು ಬೀರಿ
ಕೊನೆಗೆ ಕರಕಾಗಿ ಹೋಗುವೆ..
ಇದೆಂಥ ತಾಪ..
ದೀಪ, ಗೈದೆ ನೀನಾವ ಪಾಪ.?
ಜ್ಞಾನಿಗೆ ಅಜ್ಞಾನಿ
ಸಜ್ಜನಂಗೆ ದುರ್ಜನ
ದಾನಿಗೆ ಲೋಭಿ
ಬಡವಂಗೆ ಬಲ್ಲಿದ
ಮುಳ್ಳಾಗಿ ಕಾಡುವೊಲು
ಜಗದ ಕತ್ತಲು
ನಿನ್ನ ಕುಟುಕಿದಾಗ
ಮಮತೆಯಲಿ
ನೀನೆತ್ತಿಕೊಂಡದನು
ಮಡಿಲಿಗೇ ಸೇರಿಸಿದೆ..
ಮೈಯ ಉರಿಯೊಳು ಬೆರೆಸಿ
ಜಗವನ್ನೇ ಬೆಳಗಿದೆ..
ದೀಪ ನಿನಗೆ ಅನಂತ ಪ್ರಣಾಮ…🙏
🪔ರಚನೆ : ಹಮೀದಾಬೇಗಂ ದೇಸಾಯಿ ಸಂಕೇಶ್ವರ 🙏