ಮೂರು ಹೊಸ ಪ್ರಯೋಗಳು ಯಶಸ್ಸಿನ ಹಾದಿ ಸುಗಮವಾಗಲಿ
ನವಂಬರ್ ತಿಂಗಳ ಕನ್ನಡ ರಾಜ್ಯೋತ್ಸವ ಆಚರಣೆಯ ಮಾಸದಲ್ಲಿ ಮೂರು ಹೊಸ ಪ್ರಯೋಗಳು ಜಾರಿಗೊಂಡಿವೆ.
ಅವು ಯಶಸ್ಸಿನ ಹಾದಿಯಲ್ಲಿದ್ದು ಮುಂಬರುವ ದಿನಗಳಲ್ಲಿ
ಹೊಸತನಕ್ಕೆ ನಾಂದಿ ಹಾಡಲಿವೆ. ಹಲವರಿಗೆ ವೇದಿಕೆಯಾದರೆ
ಇನ್ನೂಳಿದವರಿಗೆ ಪ್ರೇರಣೆಯಾಗುವದರಲ್ಲಿ ಸಂಶಯವಿಲ್ಲ.
೧) ಮಸ್ಕಿಯಲ್ಲಿ ಮಹಿಳೆಯರೇ ಸೇರಿ ಹಣಕಾಸು ಸಂಸ್ಥೆ ಅಕ್ಷತಾನಿಧಿ ಸೌಹಾರ್ದ ಸಹಕಾರಿ ಸಂಸ್ಥೆ ಆರಂಭಿಸಿರುವದು.
೨) ಸಾರ್ವಜನಿಕರೇ ಸೇರಿ ಸಹಕಾರ ತತ್ವದ ಅಡಿಯಲ್ಲಿ ದೇವನಾಂಪ್ರಿಯ ಪುಸ್ತಕ ಪ್ರಕಾಶನ ಮತ್ತು ಓದುಗರ ಸಂಘ ಸ್ಥಾಪಿಸಿರುವದು.
೩) ಕಥಾ ಸಾಹಿತ್ಯ ಪ್ರಕಾರದಲ್ಲಿ ನ್ಯಾನೋ ಕಥೆಗಳು ಈಗ ಪ್ರಸಿದ್ಧಗೊಳ್ಳುತ್ತಿರುವ ಕಥಾ ಸಾಹಿತ್ಯ. ಕಡಿಮೆ ಶಬ್ದಗಳಲ್ಲಿ ಕಥೆ ಬರೆಯುವದು.
ಬೆಳಗಾವಿಯ ಕಾವ್ಯಕೂಟ ಕನ್ನಡ ಬಳಗದ ಸದಸ್ಯರು ವಾಟ್ಸ್ ಆಪ್ ನಲ್ಲಿ ಕಥೆ ರಚಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿರುವದು.
ಈ ಮೂರು ಕಾರ್ಯಕ್ರಮ ಈ ವರ್ಷದ ಹೊಸ ಪ್ರಯೋಗಳು.
ಈ ಮೂರು ಸುದ್ದಿಗಳು e-ಸುದ್ದಿಯಲ್ಲಿ ಪ್ರಕಟವಾಗಲಿವೆ. ಓದಿ ಅಭಿಪ್ರಾಯ ತಿಳಿಸಿ.
–ಸಂಪಾದಕ
ವೀರೇಶ ಸೌದ್ರಿ ಮಸ್ಕಿ
ಕರೆಗಂಟೆ-೯೪೪೮೮೦೫೦೬೭
————————————————————————
ಕಾವ್ಯ ಕೂಟ ಕನ್ನಡ ಬಳಗದ ನ್ಯಾನೋ ಕಥಾ ಸಂಕಲನ ಬಿಡುಗಡೆ
ಕಾವ್ಯ ಕೂಟ ಕನ್ನಡ ಬಳಗದ ನ್ಯಾನೋ ಕಥಾ ಸಂಕಲನ ಬಿಡುಗಡೆ
ಕಾರ್ಯಕ್ರಮ ಬೆಳಗಾವಿಯ ಆದರ್ಶಪ್ಯಾಲೆಸ್ ಹೋಟೆಲ್ ದಲ್ಲಿ ಜರುಗಿತು. ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ಮಾತನಾಡಿದ ಕಾವ್ಯ ಕೂಟ ಬಳಗದ ಎಡ್ಮಿನ್ ಶ್ರೀ ಮತಿ ಆಶಾ ಎಸ್ ಯಮಕನಮರಡಿ ಅವರು ಕಾವ್ಯ ಕೂಟ ಬಳಗ ಕೇವಲ ಸಮಯ ಕಳೆಯಲು ಬರೆಯುವ ಬರಹಗಾರರ ವೇದಿಕೆ ಆಗಿರದೆ ನಿಜ ಸಾಹಿತ್ಯದ ಪ್ರಕಾರಗಳ ಅಧ್ಯಯನ ಆಗೂ ಸಾಹಿತ್ಯಾಸಕ್ತ ಸಮಾನ ಮನಸ್ಕರ ಬಳಗವಾಗಿದೆ. ಕನ್ನಡ ಉಳಿಸಿ ಬೆಳೆಸುವಲ್ಲಿ ನಮ್ಮ ಈ ಬಳಗ ಸಣ್ಣ ಅಳಿಲು ಸೇವೆ ಸಲ್ಲಿಸುತ್ತಿರುವುದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ ಎಂದುರು.
(ಕನ್ನಡ ಕಾವ್ಯ ಕೂಟದ ಅಡ್ಮಿನ್ ಶ್ರೀಮತಿ ಆಶಾ ಎಸ್. ಯಮಕನಮರಡಿ)
ಕೃತಿ ಉಧ್ಘಾಟಕರಾಗಿ ಆಗಿಮಿಸಿದ ರಾಷ್ಟ್ರ ಪ್ರಶಸ್ತಿ ವಿಭೂಷಿತ ಶಿಕ್ಷಕಿಯರಾದ ಶ್ರೀಮತಿ ಶಾಂತಾದೇವಿ ಹುಲೆಪ್ಪನವರಮಠ ಅವರು ಮಾತನಾಡುತ್ತ ಕಾವ್ಯ ಕೂಟ ಬಳಗವು ಕಲಿತು ಕಲಿಸುವಾ ವೇದಿಕೆ. ಇಲ್ಲಿ ಬರಹದ ಪ್ರಕಾರಗಳೊಂದಿಗೆ
ಮಾನವೀಯ ಮೌಲ್ಯಗಳು ಇಲ್ಲಿ ವಿಜ್ರಂಭಿಸುವ ವೇದಿಕೆಯಾಗಿದೆ
Every litterateur is kabaddi player each one drag pull the leg of each ನನ್ನು ನೋಡಬೇಡ ನಾನು ಬರೆದದ್ದು ನೂಡು ಮ ನುಷ ಅನುಕರಣ ಶೀಲ ಲಂಕೇಶ್ anantamurty ಈ ಸಾಲಿನವರು.
ಬರಹ ಮುಖ್ಯ ಬದುಕು ಅಲ್ಲ
ವಚನ ಕಾರ ರು ಬದುಕಿದಂತೆ ಬರೆದರು. ಹರಿ ಹರ ರಾಘವಾಂಕ ಬರೆದಂತೆ ಬದುಕಿದರು
ಮನುಷ್ಯ ದ್ವಂದ್ವ ಗಳ ತವರೂರು
ವಿಭಕ್ತ ಕುಟುಂಬ ಸಂಕ್ಷಿಪ್ತ ಏಕೆ ಬೇಡ
ಎಂದು ಬಳಗದ ಕುರಿತು ಹಾಗೂ ಕೃತಿಯ ಕುರಿತು ಅಭಿಮಾನದ ಮಾತುಗಳನ್ನು ಆಡಿದರು.
ಕೃತಿ ಪರಿಚಯ ಮಾಡಿಕೊಟ್ಟ ಜಿಲ್ಲೆಯ ಹಿರಿಯ ಸಾಹಿತಿಗಳಾದ ಡಾ. ಪಿ.ಜಿ .ಕೆಂಪಣ್ಣವರ ಕೃತಿಯ ಕುರಿತು ಮಾತನಾಡುತ್ತಾ ಸಮಾಜದ ಮೌಲ್ಯಗಳ ಕುಸಿತವನ್ನು ಮಾರುಕಟ್ಟುವ ಮಿಡಿತದಲ್ಲಿ ಕಾಲಕ್ಕೆ ತಕ್ಕಂತೆ ಸಾಹಿತ್ಯದ ಅಭಿರುಚಿ ಗಳು ಬದಲಾಗುತ್ತವೆ.ತಾವು ಬದುಕುವುದರೊಂದಿಗೆ ಇತರರು ಬದುಕಬೇಕೆನ್ನುವ ಸಂದೇಶವನ್ನು ನೀಡುವ ಚಿಕ್ಕ ಚೊಕ್ಕ ಕಥೆಗಳು ಈ ಸಂಕಲನದಲ್ಲಿ ದಾಖಲಾಗಿವೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿದ ಕಲಬುರ್ಗಿ ನೂತನ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರು ಖ್ಯಾತ ಗಜಲ್ ಕವಿಗಳಾದ ಡಾ.ಮಲ್ಲಿನಾಥ ತಳವಾರ ಗುರುಗಳು ಮಾತನಾಡುತ್ತ ಮಾನವ ಇಂದು ಎಲ್ಲವನ್ನೂ ಕಾಲದ ಮೇಲೆ ಗೂಬೆ ಕೂರಿಸುವ ಪ್ರವೃತ್ತಿಯನ್ನು ಹೊಂದಿದ್ದು, ಅದನ್ನು ಸಾಹಿತ್ಯಿಕವಾಗಿಯೂ ಬಳಸುತ್ತಿರುವುದು ದುರಂತ. ಆಸಕ್ತಿಯಿಂದ ಸಾಹಿತ್ಯದ ರೂಪಗಳ ಬಗ್ಗೆ ಗಮನ ಕೊಡದೆ, ಅವಕಾಶವಾದಿಯಾಗಿ ಸಾಗುತ್ತಿದ್ದಾನೆ. ಈ ಕಾರಣಕ್ಕಾಗಿಯೇ ಬದುಕು-ಬರಹ ಒಂದೆಯಾಗದೆ ದೂರ ದೂರವೇ ಉಳಿಯುತ್ತಿವೆ. ಇದರಿಂದ ಪಾರಾಗಲು ಬದುಕು ಬರಹ ಒಂದೇ ಆಗಬೇಕು. ಬರಹಗಾರರು ತಮ್ಮ ಮೇಲಿನ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಮುನ್ನಡೆಯಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಗೋಕಾಕದ ಹಿರಿಯ ಸಾಹಿತಿಗಳು ಕಾವ್ಯ ಕೂಟ ಬಳಗದ ಸಂಸ್ಥಾಪಕರಾದ ಶ್ರೀ ಈಶ್ವರ ಮಮದಾಪೂರ ಗುರುಗಳು ಮಾತನಾಡುತ್ತಾ
ಚಿಕ್ಕದಾದರೂ ಚೊಕ್ಕದಾದ ಅರ್ಥವನ್ನು ನೀಡಬಲ್ಲ ಉತ್ತಮ ನೀತಿ ಸಂದೇಶವನ್ನು ನೀಡಬಲ್ಲ ಎಲ್ಲ ಆಯಾಮಗಳನ್ನು ನ್ಯಾನೋ ಕತೆಗಳು ಹೊಂದಿವೆ. ಆಧುನಿಕ ಒತ್ತಡದ ವೇಗದಲ್ಲಿ ನ್ಯಾನೊಗಳು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತವೆ. ಬೆಳಗಾವಿಯ ಕಾವ್ಯಕೂಟ ಬಳಗದ ಸದಸ್ಯರು ಅತ್ಯಂತ ಕ್ರಿಯಾಶೀಲರಾಗಿದ್ದು ಆಶಾ ಯಮಕನಮರ್ಡಿ ನೇತೃತ್ವದಲ್ಲಿ ಅತ್ಯುತ್ತಮ ಕಾರ್ಯವನ್ನು ಸಲ್ಲಿಸುತ್ತಿದ್ದು ಹೆಮ್ಮೆಯ ಸಂಗತಿಯಾಗಿದೆ. ವರ್ಷಕ್ಕೊಂದು , ಎರಡು ಕೃತಿಗಳನ್ನು ಈ ನಾಡಿಗೆ ನೀಡುವಂತಾಗಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮ ಪ್ರಾರಂಭದಲ್ಲಿ ದಲ್ಲಿ ಶ್ರೀ ಮತಿ ಹೇಮಾ ಭರಭರೆ ಪ್ರಾರ್ಥನೆ ಮಾಡಿದರು, ಲಲಿತಾ ಕ್ಯಾಸನ್ನವರ ಸ್ವಾಗತ ಕೋರಿದರು, ಮಂಜುಶ್ರೀ ಹಾವಣ್ಣವರ ಅಥಿತಿಗಳ ಪರಿಚಯ ಮಾಡಿದರು, ಸನ್ಮಾನಿತರ ಪರವಾಗಿ ಧಾರವಾಡದ ಹಿರಿಯಸಾಹಿತಿ ರಾಧಾ ಶ್ಯಾಮರಾವ್,ಅಥಣಿಯ ಶ್ರೀಮತಿ ರೋಹಿಣಿ ಯಾದವಾಡ, ಇಳಕಲ್ಲದ ಶ್ರೀ ಮತಿ ಮಂಜುಳಾ ಬನ್ನಿಗೋಳಮಠ ಮಾತನಾಡಿದರು.
ಶ್ರೀ ಮತಿ ನಿರ್ಮಲಾ ಪಾಟೀಲ್ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು ಪ್ರಭಾ ಪಾಟೀಲ್ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕಾವ್ಯ ಕೂಟ ಬಳಗದ ಎಲ್ಲಾ ಸದಸ್ಯರಾದ ಶ್ರೀಮತಿವಿದ್ಯಾ, ಪ್ರಭಾ, ಶಾಂತಲಾ, ಭಾರತಿ, ಸುಧಾ, ಪ್ರೇಮಾ,ಅಕ್ಕಮಹಾದೇವಿ,ಮಮತಾ,ಅನಿತಾ,ರೇಣುಕಾ ಜ್ಯೋತಿ ಬದಾಮಿ, ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಶ್ರೀಮತಿ ಹೇಮಾ ಸುನೋಳ್ಳಿ ಕಾರ್ಯಕ್ರಮ ಆಯೋಜನೆಗೆ ಸಹಕರಿಸಿದ ಶ್ರೀಮತಿ ಶೈಲಜಾ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.