ಮುದ್ದು ಮಕ್ಕಳು
ಮುದ್ದು ಮಮತೆಯ ಮಕ್ಕಳು ನೀವು
ತಿದ್ದಿ ತೀಡಿದ ಗುರುವಿಗೆ ನಮಿಸಿ
ವಿದ್ಯೆ ಬುದ್ಧಿ ವಿನಯ ಕಲಿತು
ಎದ್ದು ನಿಲ್ಲಿರಿ ಎದೆಯುಬ್ಬಿಸಿ.
ಭವ್ಯ ಭಾರತದ ಭವಿಷ್ಯ ನೀವು
ದಿವ್ಯ ರೂಪದಿ ಬೆಳಗುವಂತೆ
ನವ್ಯ ನವನಿರ್ಮಾಣ ರೂಪಿಸಿ
ಗಮ್ಯತೆಯೆಡೆಗೆ ಗಮನ ಹರಿಸಿ.
ಧರ್ಮ ಮಾರ್ಗದಿ ಹಿರಿಯರನುಭವದಿ
ದಯೆ ಪ್ರೀತಿ ಸಹನೆ ಸ್ನೇಹದಿ
ಸಾಧಿಸಿ ನಿಲ್ಲಿ ಸಮಾಜ ಮುಖಗಳ
ಭೇದಿಸ ಬನ್ನಿ ಬಾಳ ಬವಣೆಗಳ
ಆಸೆ ಆಕಾಂಕ್ಷೆ ನೀವೆ ನಮಗೆ
ಬಾಳಿನ ಚಿಗುರು ಬಯಕೆಯ ಬೇರು
ಬೆಳೆದು ಬೆಟ್ಟವಾಗಲಿ ಬದುಕು
ಹೂ ಹಣ್ಣು ತಳೆದು ಹೆಮ್ಮರವಾದಲಿ.
–ಸವಿತಾ. ಮಾಟೂರ. ಇಲಕಲ್ಲ.