ಅನ್ನದಾನೇಶ್ವರ ಮಠದ ಡಾ.ಸಂಗನಬಸವ ಮಹಾಸ್ವಾಮೀಜಿಗೆ ಶ್ರದ್ಧಾಂಜಲಿ

ಅನ್ನದಾನೇಶ್ವರ ಮಠದ ಡಾ.ಸಂಗನಬಸವ ಮಹಾಸ್ವಾಮೀಜಿಗೆ ಶ್ರದ್ಧಾಂಜಲಿ

e-ಸುದ್ದಿ ಮಸ್ಕಿ

ಹೊಸಪೇಟೆ ಹಾಲಕೇರಿ ಅನ್ನದಾನೇಶ್ವರ ಮಠದ ಪೀಠಾಧಿಪತಿ ಡಾ.ಸಂಗನಬಸವ ಮಹಾಸ್ವಾಮೀಜಿ ಬೆಂಗಳೂರಿನಲ್ಲಿ ಲಿಂಗೈಕ್ಯರಾಗಿದ್ದಾರೆ.
ಸ್ವಾಮೀಜಿಯವರು ಉತ್ತರ ಕರ್ನಾಟಕ ಭಾಗದಲ್ಲಿ ಪ್ರಮುಖರಾಗಿದ್ದು ಅನೇಕ‌ ಮಠಾಧೀಶರಿಗೆ ಮಾರ್ಗದರ್ಶಕರಾಗಿದ್ದರು.
ಸ್ವಾಮೀಜಿಗಳ ಕಾರ್ಯ ಕ್ಷಮತೆಯನ್ನು ಅವರ ಮಾರ್ಗದರ್ಶನವನ್ನು ವಳಬಳ್ಳಾರಿಯ ಸಿದ್ದಲಿಂಗ‌ಮಹಾಸ್ವಾಮಿಗಳು, ಸಂತೆಕೆಲ್ಲೂರಿನ ಗುರುಬಸವ ಮಹಾಸ್ವಾಮಿಗಳು, ಮಸ್ಕಿ ಗಚ್ಚಿನಹಿರೇಮಠದ ವರರುದ್ರಮುನಿ‌ ಶಿವಾಚಾರ್ಯರು, ಅಂಕುಶದೊಡ್ಡಿಯ ವಾಮದೇವ ಶಿವಾಚಾರ್ಯರು ಪೂಜ್ಯರುಗಳು ಶ್ರೀಗಳ‌ ಮಾರ್ಗದರ್ಶನವನ್ನು ಸ್ಮರಿಸಿದ್ದಾರೆ.
ಶ್ರೀಮಠದ ಪರಮ‌ಭಕ್ತರಾದ ಮರೇಗೌಡ ಪಾಟೀಲ ಬಳ್ಳಾರಿ, ಕಸಾಪ‌ ಮಾಜಿ‌ ಜಿಲ್ಲಾ ಅಧ್ಯಕ್ಷ ಮಹಾಂತೇಶ ‌ಮಸ್ಕಿ, ಕಸಾಪ ತಾಲೂಕು ಅಧ್ಯಕ್ಷ ಘನಮಠದಯ್ಯ ಸಾಲಿಮಠ, ಶರಣ ಸಾಹಿತ್ಯ ಪರಿಷತ್ತ್ ಅಧ್ಯಕ್ಷ ವೀರೇಶ ಸೌದ್ರಿ, ಪತ್ರಕರ್ತ ಪ್ರಕಾಶ ಮಸ್ಕಿ, ಮಸ್ಕಿ ಶ್ರೀಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಎನ್. ಶಿವಕುಮಾರ ಶ್ರೀಗಳ ಅಗಲಿಕೆಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

Don`t copy text!