ಅಕಾಲಿಕ ಮಳೆಗೆ ವಿವಿಧ ಬೆಳೆಗಳು ಹಾನಿ: ಸೂಕ್ತ ಪರಿಹಾರಕ್ಕೆ ರೈತರಿಂದ ಸಚಿವರಿಗೆ ಮನವಿ

ಅಕಾಲಿಕ ಮಳೆಗೆ ವಿವಿಧ ಬೆಳೆಗಳು ಹಾನಿ: ಸೂಕ್ತ ಪರಿಹಾರಕ್ಕೆ ರೈತರಿಂದ ಸಚಿವರಿಗೆ ಮನವಿ
e-ಸುದ್ದಿ ಮಸ್ಕಿ
 ತಾಲೂಕಿನ ಕಲ್ಮಂಗಿ ಹೋಬಳಿಯ ವಿವಿಧ ಗ್ರಾಮಗಳ ಹಾಗೂ ಕಲ್ಮಂಗಿ ಗ್ರಾಮ ಪಂಚಾಯತಿ ಸೇರಿದಂತೆ ಅನೇಕ ಗ್ರಾಮಗಳ ಸಂತ್ರಸ್ತರಿಗೆ ಕೂಡಲೇ ಬೆಳೆ ಹಾನಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕಲ್ಮಂಗಿ ಗ್ರಾಮದ ರೈತರು ರಾಯಚೂರ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ್ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸಚಿವರನ್ನು ಭೇಟಿ‌ಮಾಡಿದ ರೈತರು ಮನವಿ ಸಲ್ಲಿಸಿದರು
ಸತತ ಮಳೆಯಿಂದಾಗಿ ಬೆಳೆಗಳು ಹಾಳಾಗಿದ್ದು ಅನೇಕ ಗ್ರಾಮಗಳ ರೈತರ ಕೃಷಿ ಭೂಮಿಗಳಲ್ಲಿದ್ದ ಭತ್ತ, ತೊಗರಿ , ಮೆಣಸಿನಗಿಡ, ಬಿಟಿ ಹತ್ತಿ, ಉಳ್ಳಾಗಡ್ಡಿ ಹಾಗೂ ಇತರ ಬೆಳೆಗಳು ಸೇರಿದಂತೆ ಮುಂಗಾರು ಬೆಳೆಗಳು ಸಂಪೂರ್ಣ ನೆಲಕಚ್ಚಿವೆ. ಎಕರೆಯೊಂದಕ್ಕೆ 25 ಸಾವಿರ ರೂ. ಖರ್ಚು ಮಾಡಲಾಗಿದೆ ಹಾನಿಗೀಡಾದ ರೈತರ ಜಮೀನುಗಳಿಗೆ ಹೋಗಿ ಅಧಿಕಾರಿಗಳು ಪರಿಶೀಲನೆ ಮಾಡಿ ಎರಡು ಮೂರು ದಿನದಲ್ಲಿ ವರದಿಯನ್ನು ಸರಕಾರಕ್ಕೆ ಸಲ್ಲಿಸಿ ಹಾನಿಯಾದ ಕೃಷಿ ಪ್ರದೇಶಕ್ಕೆ ಪ್ರತಿ ಎಕರೆಗೆ 35 ಸಾವಿರ ರೂ. ಪರಿಹಾರ ನೀಡಬೇಕು ಮತ್ತು ರೈತರು ತಮ್ಮ ಭೂಮಿಯಲ್ಲಿ ಬಿತ್ತನೆ ಮಾಡಲು ಕಡಲೇಬೀಜ ರೈತರಿಗೆ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಒದಗಿಸಿ ಕೊಡಬೇಕು ಮತ್ತು ಶೀಘ್ರವಾಗಿ ಸೂಕ್ತ ಪರಿಹಾರ ನೀಡಬೇಕು ಒಂದು ವೇಳೆ ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ರೈತರು ಎಚ್ಚರಿಸಿದರು.
Don`t copy text!