ವಿಶ್ವ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ಅಪಾರ- ಆಶಾ ಎಸ್. ಯಮಕನಮರಡಿ

ವಿಶ್ವ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ಅಪಾರ- ಆಶಾ ಎಸ್. ಯಮಕನಮರಡಿ

e-ಸುದ್ದಿ ಬೈಲಹೊಂಗಲ

ಪತ್ರಿ ಬಸವನಗರ ಅಭಿವೃದ್ಧಿ ಸಂಘ ಹಾಗೂ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಬೈಲಹೊಂಗಲ ತಾಲೂಕ ಘಟಕ ಇವರ ಸಹಯೋಗದಲ್ಲಿ 2021 ನಂಬರ್ ಕನ್ನಡ ರಾಜ್ಯೋತ್ಸವದ ಮಸಾಚರಣೆ ಕಾರ್ತಿಕೋತ್ಸವದ ನಿಮಿತ್ಯ ಶನಿವಾರ ದಿನಾಂಕ 27 -11- 2021 ರಂದು ಜಿಲ್ಲಾಮಟ್ಟದ ಕವಿಗೋಷ್ಠಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರವಚನ ಪಟು ಸಿದ್ದೇಶ್ವರ ಸಾಹಿತ್ಯ ವೇದಿಕೆ ತಾಲೂಕ ಘಟಕದ ಅಧ್ಯಕ್ಷರಾದಶರಣೆ ಪ್ರೇಮಾ ಅಂಗಡಿ ಅವರು ಪ್ರಸ್ತಾವಿಕ ಮಾತನಾಡುತ್ತಾ ಕನ್ನಡ ಭಾಷೆ ಹಾಗೂವಚನ ಸಾಹಿತ್ಯ ವಿಶ್ವದಾದ್ಯಂತ ಪ್ರಚಾರಗೊಳಿಸಲು ಈ ವೇದಿಕೆಯು ಶ್ರಮಿಸಿದೆ ಎಂದು ತಿಳಿಸಿದರು.

ಸ್ಥಳಿಯ ಪತ್ರಿ ಬಸವನಗರದ ಪತ್ರಿಬಸವೇಶ್ವರ ಅನುಭವ ಮಂಟಪದಲ್ಲಿ “ವಿಶ್ವ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ” ವಿಷಯ ಕುರಿತು ಏರ್ಪಡಿಸಲಾಗಿದ್ದ ಈ ಕವಿಗೋಷ್ಠಿಗೆ ಉದ್ಘಾಟಕರಾಗಿ ಆಗಮಿಸಿದ ಸಿದ್ದೇಶ್ವರ ಸಾಹಿತ್ಯ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ರಾಜ್ಯ ಸಂಚಾಲಕರಾದ ಕವಿಯಿತ್ರಿ ಶ್ರೀ ಮತಿ ಆಶಾ ಎಸ್ ಯಮಕನಮರಡಿ ಇವರು ವಚನ ವಾಚನದ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಕನ್ನಡ ಭಾಷೆಯನ್ನು ದೈವತ್ವಕ್ಕೆ ಏರಿಸಿದ ವಚನ ಸಾಹಿತ್ಯವನ್ನು ಉಳಿಸಿ ಬೆಳೆಸುವುದು ರೊಂದಿಗೆ ಅದರ ತತ್ವಸಾರವನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ವಿಶ್ವವೆ ಕಲ್ಯಾಣ ರಾಜ್ಯವಾಗುವುದು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಶಿಕ್ಷಕಿ ಗೌರಿ ಕರ್ಕಿ ಅವರು ಕನ್ನಡ ಸಾಹಿತ್ಯ ಬೆಳೆದುಬಂದ ಬಗೆ ಹಾಗೂ ವಿಶ್ವಸಾಹಿತ್ಯಕ್ಕೆ ಕನ್ನಡ ಸಾಹಿತ್ಯದ ಕೊಡುಗೆ ಕುರಿತು ವಿವರವಾಗಿ ತಿಳಿಸಿದರು. ಕವಿಗೋಷ್ಠಿ ಸ್ಪರ್ಧೆ ಯ ನಿರ್ಣಾಯಕರಾಗಿ ಬೈಲಹೊಂಗಲದ ಹಿರಿಯ ಸಾಹಿತಿಗಳಾದ ಶಿಕ್ಷಕಿ ಗೌರಾದೇವಿ ತಾಳಿಕೋಟಿ ಅವರು ತಮ್ಮ ಮಾತುಗಳಲ್ಲಿ ಕವನ ರಚನೆಯ ನಿಯಮ ಹಾಗೂ ಸತ್ವಯುತ ಕವನ ರಚನೆಗೆ ನಿರಂತರ ಓದು ಬಹುಮುಖ್ಯ ಎಂದು ಕರೆಕೊಟ್ಟರು.

ಗೌರವ ಉಪಸ್ಥಿತಿಯಲ್ಲಿ ಮಕ್ಕಳ ಸಾಹಿತಿ ಶ್ರೀ ಮತಿ ಅನ್ನಪೂರ್ಣ ಕನೋಜ ಹಾಗೂ ಶ್ರೀಯುತ ಬ .ವಿ ನೇಸರಗಿ ಅವರಿದ್ದರು. ಶ್ರೀಮತಿ ರಾಜೇಶ್ವರಿ ದ್ಯಾಮನಗೌಡರ ಸ್ವಾಗತಿಸಿದರು.
ಶ್ರೀ ಮತಿ ವಿದ್ಯಾ ನೀಲಪ್ಪನವರ  ನಿರೂಪಿಸಿದರು.ಶ್ರೀಮತಿ ಸುಮಾ ಸವದಿ ವಂದಿಸಿದರು.
ಸರ್ಕಾರಿ ಪ್ರೌಢಶಾಲೆ ಮರಕುಂಬಿ ತಾಲೂಕು ಸೌದತ್ತಿ ಶಾಲೆ ಮಕ್ಕಳು ನಾಡಗೀತೆ ಪ್ರಸ್ತುತ ಪಡಿಸಿದರು.
ಕಾರ್ಯಕ್ರಮ ಆಯೋಜನೆಗೆ ಧಾರವಾಡದ ಹಿರಿಯ ಸಾಹಿತಿಗಳಾದ ಶ್ರೀಮತಿ ಲೀಲಾ ಕಲಕೋಟಿ ಅವರು ಪ್ರಯೋಜಕತ್ವ ವಹಿಸಿಕೊಂಡಿದ್ದರು. ಅನಸುಯ್ಯಾ ಸವದಿ ,
ಮಂಗಳ ಅಕ್ಕಿ ಮಹಾನಂದ ಕಾಪ್ಸಿ, ವೀಣಾ ಕಾಪ್ಸಿ ಗೀತಾ ಅರಳಿಕಟ್ಟಿ, ಅನುರಾಧ ಕರಡಿಗುದ್ದಿ ರಾಜೇಶ್ವರಿ ದ್ಯಾಮನಗೌಡದಂಪತಿಗಳು, ಸುವರ್ಣ ಬಿಜಗುಪ್ಪಿ ಮಂಗಳಾ ಢಮ್ಮಣಿಗೆ…ಮಲ್ಲಮ್ಮ ಮಾಸ್ತಮ್ಮನವರ ದಂಪತಿಗಳು, ಬ ವಿ ನೇಸರ್ಗಿ, ಸಂಗೊಳ್ಳಿ ಶಿಕ್ಷಕರು ಇವರೆಲ್ಲ ಉಪಸ್ಥಿತರಿದ್ದರು.

ಗೋದಾವರಿ ಎಸ್ ಪಾಟೀಲ, ಅಮಜವ್ವ ಭೋವಿ, ಮಂಜುಳ್ ಶೆಟ್ಟರ್  ಮೀನಾಕ್ಷಿ ಸೂಡಿ, ರೂಪ ಕುಲಕರ್ಣಿ, ಸಂದೀಪ್ ಕುಲಕರ್ಣಿ, Smt ಎಲಿಗಾರ ಕವಿಗೋಷ್ಠಿ ಯಲ್ಲಿ ಭಾಗವಹಿದ್ದರು.

 

Don`t copy text!