ಅಮರವಾದ ಅನುಭವಗಳು!!
ನೆನಪೆಂಬ ನೋವಿನಲಿ
ನಿರೀಕ್ಷೆಯ ಹೊರೆ ಇಲ್ಲ
ಉಡುಗೊರೆಯ ಉಪಟಳಗಾಗಿ,
ಸಂತಸದೊಂದಿಗೆ ರಾಜಿಬೇಕಿಲ್ಲ!
ಮೂದಲಿಕೆಯ ಮಾತಿನಿಂದ
ಮೋಸಮಾಡುವ ಮನುಜರಿಲ್ಲ
ಇರಿಸು ಮುರುಸುಗಳಿಂದ
ಮನಸು ಈಗ ಮುದಿಯಾಗಿಲ್ಲ!
ಬಂಧನಗಳ ಬದುಕಿನಲಿ
ಬರಡು ಭಾವನೆಗಳ ಭಾರವಿಲ್ಲ,
ಭೋರ್ಗರೆವ ಬಲ್ಲಹನಿಲ್ಲದೇ
ಬಾಳಿನಲಿ ಈಗ ಬವಣೆಗಳೂ ಇಲ್ಲ!!
ಅನುಮಾನ ಅಪಮಾನಗಳಿಂದ
ಅನಿಷ್ಟಗಳಿಗೆ ಆಹ್ವಾನ ನೀಡಬೇಕಿಲ್ಲ
ಹುರಿದುಂಬಿಸುವ ಹುಮ್ಮಸ್ಸಿನೊಂದಿಗೆ
ಅಮರವಾದವು ಈಗ ಎನ್ನ ಅನುಭವಗಳೆಲ್ಲಾ!!!??
-ಫರ್ಹಾನಾಜ್ ಮಸ್ಕಿ
ಸಹಾಯಕ ಪ್ರಾಧ್ಯಾಪಕರು ಹುಳಿಯಾರು