ನನ್ನೊಲವಿನ ಹಾಡು
ನನ್ನೊಲವಿನ ಹಾಡು
ನೀ ಕೇಳು ನನ್ನಿನಿಯಾ
ನೋವು ನುಂಗಿಹ ನೂರು
ಕೊರಳ ದನಿಯಾ
ಭಾಷೆಗಳ ಬೀಸಣಿಕೆ
ಬೀಸದಿರು ನನ್ನೆದರು
ನಿನ್ನ ಕಾವ್ಯವು
ಕಡೆದ ಹೆಣ್ಣು ನಾನಲ್ಲ
ಬೇಗುದಿಯ ಜೀವಕೆ
ಬಯಕೆಗಳ ಸೊಲ್ಲಿಲ್ಲ
ಕನಸುಗಳ ಹಾದಿಯಲಿ
ನಿಂತಿರುವೆ ನಿನ್ನ ನೆನಪಲಿ
ಕಟ್ಟು ಪಾಡಿಗೆ ಬಿದ್ದು
ಸೋಲಲು ನಾನು
ಆ ಸೀತೆ,ಸಾವಿತ್ರಿ ಅಲ್ಲ
ನಿತ್ಯ ನಿನ್ನ ನಗುವಿಗೆ
ಹಾತೊರೆವ ಚಕೋರ ಪಕ್ಷಿ
ಶಶಿ ಬೆಳಕಲಿ
ಬದುಕು ಬಯಸುವ
ಮುಗ್ಧ ಪೋರಿ
-ಪ್ರೊ ಸಾವಿತ್ರಿ ಕಮಲಾಪುರ