ಅಮ್ಮ

ಅಮ್ಮ

ಅಮ್ಮ ಹರಿದ ಹಾಳೆಗಳ
ಮುರಿದ ಮನಸ್ಸುಗಳ
ಬೆಸೆವ ಒಲವಿನ ಬೆಸುಗೆ ||

ಅಮ್ಮ ಸುಂದರ ಬದುಕಿನ
ರಂಗಿನ ನಾಳೆಗಳ
ಮುತ್ತಿನ ಮುನ್ನುಡಿ ||

ಅಮ್ಮ ಎರಡೇ ಅಕ್ಷರಗಳ
ತನಗೇನನ್ನೂ ಬೇಡದ
ನಿಸ್ವಾರ್ಥ ಜೀವಿ ||

ಅಮ್ಮ ಖುಷಿ ಹಂಚುವ
ಸದಾ ನಗುತಿರುವ
ವಾತ್ಸಲ್ಯ ದೇವತೆ ||

ಅಮ್ಮ ಬೆಲೆ ಕಟ್ಟಲಾಗದ
ಅಳತೆಗೆ ನಿಲುಕದ
ಮರೆಯಬಾರದ ಮಾಣಿಕ್ಯ ||

ಅಮ್ಮ ಮಮತೆ ತುಂಬಿದ
ಜುಳುಜುಳಿಸುವ ಜೀವನದಿ
ಕಷ್ಟಗಳಿಗೆದರದ ಹಿಮವಂತೆ ||

ಅಮ್ಮನ ಬಿಟ್ಟರೇನೂ ಇಲ್ಲೆನಗೆ
ಅವಳದೇ ಜಪ
ಅಮ್ಮ….ಅಮ್ಮ….ಅಮ್ಮ…..||

✍️ ಆದಪ್ಪ ಹೆಂಬಾ ಮಸ್ಕಿ

Don`t copy text!