ಲೇಖಕಿ, ಸಮಾಜಮುಖಿ ಚಿಂತಕಿ, ಪರಿವರ್ತನೆಯ ಹರಿಕಾರಿಣಿ, ವಿದ್ಯಾರ್ಥಿಗಳಿಗೆ ತಾಯಿ ಸ್ವರೂಪಿಣಿ ಪ್ರೊ.ಸಾವಿತ್ರಿ ಕಮಲಾಪೂರ
ಪ್ರೊ. ಸಾವಿತ್ರಿ ಮಹದೇವಪ್ಪ ಕಮಲಾಪೂರ ಮೂಲತಹ ಸವದತ್ತಿ ತಾಲೂಕಿನ ಮುರಗೋಡದಲ್ಲಿ ಜನನ. ಇವರು 20-06-1975 ರಂದು ಜನನ. ಪ್ರಾಥಮಿಕ ಹಾಗೂ ಪ್ರೌಢ ಶಾಲೆಯನ್ನು ಮುರಗೋಡದ ಶ್ರೀ ಮಹಾಂತೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಮುಗಿಸಿದರು. ಪದವಿಯನ್ನು ಎಸ್. ಜಿ .ವಿ ಕಾಲೇಜೆನಲ್ಲಿ ಮುಗಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡರು. ಬಿ. ಇಡಿ.ಯನ್ನು ಬೈಲಹೊಂಗಲದ ಕೆ.ಆರ್. ಸಿ ಯಲ್ಲಿ ಮುಗಿಸಿ ಉತ್ತಮ ಆಟಗಾರಳಾಗಿ ವೀರಾಗ್ರಣಿ ಎನಿಸಿಕೊಂಡಿರುವರು.ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಪ್ರಥಮ ವರ್ಗದಲ್ಲಿ ಪಾಸು ಮಾಡಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಇಡಿ ಪದವಿಯನ್ನು ಮುಗಿಸಿದರು. 1998 ರಲ್ಲಿ ಪ್ರೌಢಶಾಲೆಯಲ್ಲಿ 9 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಂತರ 2007 ರಲ್ಲಿ ಎಸ್ ಆರ್ ಸಂತಿ ಸರಕಾರಿ ಪದವಿ ಪೂರ್ವ ಕಾಲೇಜು ಹಳ್ಳೂರ ದಲ್ಲಿ ಕನ್ನಡ ಉಪನ್ಯಾಸಕಿ ಹಾಗೂ ಕಾಲೇಜಿನ ಸುಧಾರಣಾ ಸಮಿತಿಯ ಹಿರಿಯ ಉಪನ್ಯಾಸಕಿಯಾಗಿ ಈಗ ಸಧ್ಯ ಪ್ರಭಾರಿ ಪ್ರಾಚಾರ್ಯೆ ಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಪ್ರೊ ಸಾವಿತ್ರಿ ಕಮಲಾಪೂರ ಅವರು ಉಪನ್ಯಾಸಕರು ಅಷ್ಟೇ ಅಲ್ಲ ಒಳ್ಳೆಯ ಆಟಗಾರರೂ ಕೂಡಾ. ಸದೃಡ ದೇಹದಲ್ಲಿ ಸದೃಡ ಮನಸ್ಸು ಎನ್ನುವಂತೆ ಕಾಲೇಜಿನ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸದಾ ಮುಂಚುಣಿಯಲ್ಲಿರುವಂತೆ ನೋಡಿಕೊಂಡಿದ್ದಾರೆ. ಒಳ್ಳೆಯ ಬರಹಗಾರರು.ಕವಯತ್ರಿಯೂ ಹೌದು. ಇವರ ಕಾವ್ಯಸಂಕಲನ ‘ ನೆನಪಿನ ಅಂಗಳದಲ್ಲಿ 2019 ರಂದು ಪ್ರಕಟಗೊಂಡಿದೆ . ಕಥೆಗಾರರಾಗಿ ಗಾಯತ್ರಿ ಎಂಬ ಸಣ್ಣ ಕಥೆ, & ಕಥಾಸಂಕಲನ. ಪ್ರಕಟಿಸಿದ್ದಾರೆ.
ಪ್ರಬಂಧ ಮಾಲಿಕೆ.ಸಾಧನೆಯ ಹಾದಿಯಲ್ಲಿ ವಿದ್ಯಾರ್ಥಿಗಳ ಕಿರು ಪುಸ್ತಕಗಳನ್ನು ಹಾಗೂ ಕವನ ಸಂಕಲನವನ್ನು ಹೊರತರಲು ಬಯಸಿರುವರು.
ವಿದ್ಯಾರ್ಥಿಗಳಿಗೆ ಶಿಸ್ತು. ಜೀವನದ ಮೌಲ್ಯಗಳನ್ನು ತಿಳಿಯ ಪಡಿಸುವುದರ ಜೊತೆಗೆ. ಮಕ್ಕಳೊಂದಿಗೆ ಮಕ್ಕಳಾಗಿ ಬೋಧನೆ ಮಾಡುವುದರಿಂದ ಕಾಲೇಜಿನ ಮಕ್ಕಳು ಇವರನ್ನು ಅವ್ವ ಎಂತಲೇ ಕರೆಯುತ್ತಾರೆ. ಇವರು ಬೋಧಿಸುವ ಬೋಧನಾ ಪದ್ಧತಿಯು ಮಕ್ಕಳಿಗೆ ತುಂಬಾ ಇಷ್ಟ. ಪ್ರತಿ ವರುಷ ಕಾಲೇಜಿನ ಫಲಿತಾಂಶ ಹೆಚ್ಚಾಗುತ್ತಾ ವಿಶೇಷವಾಗಿ ಹೆಣ್ಣು ಮಕ್ಕಳೇ ಕಾಲೇಜಿಗೆ ಪ್ರಥಮ ಬರಲು ಕಾರಣರಾಗಿರುವರು.
ಇವರು ಒಳ್ಳೆಯ ಭಾಷಣಕಾರರೂ, ಒಳ್ಳೆಯ ನಿರೂಪಕಿಯರೂ ಆಗಿದ್ದಾರೆ. ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರದಲ್ಲಿ ಸಾಧಿಸಬೇಕೆಂಬ ಮಹತ್ವಕಾಂಕ್ಷಿ ಇವರಾಗಿದ್ದು ಕಾರು ಚಾಲಕಿಯಾಗಿ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.
ಇವರನ್ನು ಅನೇಕ ಸಂಘ ಸಂಸ್ಥೆಗಳು ಸತ್ಕರಿಸುವ ಮೂಲಕ ತಮ್ಮ ಘನತೆಯನ್ನು ಹೆಚ್ಚಿಸಿಕೊಂಡಿವೆ..ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕಾರಗಳು ಇವರ ಮನೆ ಬಾಗಿಲಿಗೆ ಬಂದು ಅಲಂಕೃತಗೊಂಡಿವೆ. ರಾಷ್ಟ್ರ ಕವಿ ಕುವೆಂಪು ಅವರ ಸ್ಮರಣೆಯಲ್ಲಿ ಕನ್ನಡ ಸ್ವಾಭಿಮಾನ ಸಮ್ಮಾನ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಪ್ರೊ.ಸಾವಿತ್ರಿ ಅವರು ಎಂದಿಗೂ ಅಧಿಕಾರ ,ಪ್ರಶಸ್ತಿ, ಪುರಸ್ಕಾರಕ್ಕೆ ಬೆನ್ನು ಹತ್ತದೆ ಅಲೆದಾಡಿದವರಲ್ಲ. ಪ್ರಶಸ್ತಿ ಪುರಸ್ಕಾರಗಳು ಇವರನ್ನು ಹುಡುಕಿಕೊಂಡು ಬಂದಿವೆ ಅಂತಹ ಕೆಲಸ ಕಾರ್ಯ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಪ್ರೋ. ಸಾವಿತ್ರಿ ಕಮಲಾಪೂರ ಸದ್ಯ ಮೂಡಲಗಿ ಯಲ್ಲಿ ವಾಸಮಾಡುತ್ತಿದ್ದು, ಎರಡು ಹೆಣ್ಣು ಹಾಗೂ ಒಂದು ಗಂಡು ಮಗುವಿನ ತಾಯಿಯಾಗಿ ಕುಟುಂಬ ಹಾಗೂ ಕಾಲೇಜನ್ನು ಅಚ್ಚು ಕಟ್ಟಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಪ್ರೋ.ಸಾವಿತ್ರಿ ಕಮಲಾಪೂರ ಅವರ ಪತಿ ನಾಗೇಂದ್ರ ಬಾಳಪ್ಪ ಹೊಸಮನಿ ಅವರು ಕೆ ಎಸ್ ಆರ್ ಟಿ ಸಿ ಯಲ್ಲಿ ಗೋಕಾಕದಲ್ಲಿ ಸೇವೆ ಸಲ್ಲಿಸುತ್ತಿರುವರು.
ಗ್ರಾಮೀಣ ಪ್ರದೇಶವಾದ ಹಳ್ಳೂರ ಗ್ರಾಮದ ಜನತೆ ಪ್ರೋ.ಸಾವಿತ್ರಿ ಕಮಲಾಪೂರ ಅವರ ಕಾರ್ಯವನ್ನು ಯಾವತ್ತೂ ಮರೆಯದಂತೆ ಸದಾ ಸ್ಮರಿಸುತ್ತಿದೆ ಎಂಬುದಕ್ಕೆ ಹಳ್ಳೂರು ಗ್ರಾಮದ ಕಾಲೇಜಿನ ಉಪಾಧ್ಯಕ್ಷರು ಇವರ ಬಗ್ಗೆ ಬರೆದ ಅಭಿಮಾನದ ಮಾತುಗಳೇ ಸಾಕ್ಷಿ.