ಅಂಬೇಡ್ಕರ್‌ಗೊಂದು ಮನವಿ
ಅದ್ಹೇಗೆ ನೀವು ಇಷ್ಟೊಂದು ಹೋರಾಡಿದಿರಿ?
ಈ ನೀಚ ಜಗದ ಜನರ ನಡುವೆ?
ಅಕ್ಷರ ಅಕ್ಷರದ ಅರ್ಥ ಕೇಳಿ ಕೇಳಿ
ಕಿರಿಕಿರಿ ಮಾಡುವ ಮಂದಿಯ ನಡುವೆ!?
ಶೋಷಣೆ, ಮೂದಲಿಕೆ
ಹೀಗಳೆಯುವುದೇ ಸಾಧನೆ,
ಮೇಲು- ಕೀಳು, ಗಂಡು- ಹೆಣ್ಣೇ
ಏತಕೆ ಬೇಕು ಇವೆಲ್ಲಾ ತರತಮಕೆ!
ಅದ್ಯಾವ ಶಕ್ತಿ ಪಡೆದಿದ್ದೀರಿ?
ಅದ್ಯಾವ ದೈವ ಒಲಿಸಿದ್ದೀರಿ
ಕೂರಲು ಜಾಗವೂ ನೀಡದ
ಜಗದೊಳಗೆ ದಿಗ್ಗಜರಾಗಿ ಮೆರೆದಿದ್ದೀರಿ!
ಓ ಅಂಬೇಡ್ಕರ್ !!
ಇನ್ನೂ ತಪ್ಪಿಲ್ಲ ಭೂತಗಳ ಹಾವಳಿ
ಮತ್ಯಾವಾಗ ಬರುವಿರಿ ಹಿಂದಿರುಗಿ?
ಕಾದು ಕುಳಿತಿಹೆವು ನಿಮಗಾಗಿ ನಾವು
ಜಾತಿ ಧರ್ಮದ ಭೇದಗಳಿಲ್ಲದೇ
ಗಂಡು-ಹೆಣ್ಣನು ಸರಿಸಮನಾಗಿಸಲು!!!
🖋 ಫರ್ಹಾನಾಜ್ ಮಸ್ಕಿ
ಸಹಾಯಕ ಪ್ರಾಧ್ಯಾಪಕರು
ಸ.ಪ್ರ.ದ.ಕಾ. ಹುಳಿಯಾರು.