ಶರಣ ಡಾ. ಈಶ್ವರ ಮಂಟೂರ ಬಯಲಾದರು‌

ಶರಣ ಡಾ. ಈಶ್ವರ ಮಂಟೂರ ಬಯಲಾದರು‌

ಬಸವಾದಿ ಶರಣರ ತತ್ವಗಳನ್ನು ನಾಡಿನ ತುಂಬ ಪಸರಿಸಲು ತಮ್ಮ ಇಡೀ ಬದುಕನ್ನು ಮೀಸಲಿಟ್ಟಿದ್ದ ಡಾ. ಈಶ್ವರ ಮಂಟೂರ ಅವರಿಗೆ ಹೃದಯಾಘಾತ ಎಂದರೆ ನಂಬಲಾಗುತ್ತಿಲ್ಲ. ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ನಿಷ್ಠೆಯಿಂದ ಕಾಪಾಡಿಕೊಂಡು ಬಂದಿದ್ದ ಶರಣರದು ಶಿಸ್ತುಬದ್ಧ ಜೀವನ. ಜಮಖಂಡಿ ಹತ್ತಿರದ ಮದರಕಂಡಿ ಆಶ್ರಮದ ನಿರಂತರ ಚಟುವಟಿಕೆಗಳ ಮೂಲಕ ನಾಡಿನ ಗಮನ ಸೆಳೆದಿದ್ದರು. ಅನೇಕ ವೇದಿಕೆ ಮೇಲೆ ಒಟ್ಟಾಗಿ ಇದ್ದ ನೆನಪುಗಳು ಧಾವಿಸುತ್ತವೆ.

ಮುಖ್ಯವಾಗಿ ಇಲಕಲ್ಲಿನ ಮಹಾಂತ ಅಪ್ಪಗಳ ಪ್ರಭಾವದಿಂದಾಗಿ ತಮ್ಮ ವಿಶಿಷ್ಟ ಕಾರ್ಯ ಚಟುವಟಿಕೆಗಳನ್ನು ಕೈ ಗೊಳ್ಳುತ್ತಿದ್ದ ಶರಣರ ಪ್ರವಚನದ ದೇಸಿ ಸೊಗಡನ್ನು ಮರೆಯಲಾಗದು.
ನಿರಂತರ ಶಿವಾನುಭವ, ಗಣ್ಯರ ಸಂಮಾನ, ಶಿವಯೋಗ ಶಿಬಿರಗಳು, ವಾರ್ಷಿಕ ಬೃಹತ್ ಕಾರ್ಯಕ್ರಮಗಳ ಜೊತೆಗೆ, ವೈಯಕ್ತಿಕ ಪ್ರವಚನ ನೀಡಲು ಇಡೀ ಲೋಕವನ್ನು ಸಂಚಾರ ಮಾಡುತ್ತಿದ್ದರು.
ಸಾಯುವ ವಯಸ್ಸೂ ಅವರದಲ್ಲ. ಎಮ್ಮವರಿಗೆ ಸಾವಿಲ್ಲ ಎಂಬ ಮಾತಿದೆ. ಆದರೂ ಇಷ್ಟೊಂದು ಅನಿರೀಕ್ಷಿತ ಸಾವು ಇದಾಗಬಾರದಿತ್ತು. ‘ಸಾವು’ ತನ್ನ ಶಕ್ತಿಯನ್ನು ಮತ್ತೆ ಮತ್ತೆ ಇಂತಹ ಸಾವುಗಳ ಮೂಲಕ ನಮಗೆ ಎಚ್ಚರಿಸುತ್ತಲೇ ಇರುತ್ತದೆ.
ಹೋಗಿ ಬನ್ನಿ ಶರಣರೇ…

-ಪ್ರೊ. ಸಿದ್ದು ಯಾಪಲಪರವಿ ಕಾರಟಗಿ.

Don`t copy text!