ಏಕೆ ಬಳಲಿದಿರಿ.
ಬಸವ ನೊಗ ಹೊತ್ತು
ಬಹುದೂರ ಸಾಗಿ ಬಸವ ಸಾಮ್ರಾಜ್ಯವ
ಕಟ್ಟಬೇಕಾದ ನೀವು
ಅರ್ಧ ದಾರಿಯಲಿ ಏಕೆ ಬಳಲಿದಿರಿ.
ಪ್ರವಚನದಿ ಪ್ರಖ್ಯಾತರಾಗಿ
ಬಸವ ತತ್ವ ಸಾರುತ
ನಾಡನ್ನೆ ಬಸವಮಯವಾಗಿಸಿ
ಮಧ್ಯದಲೇ ಮರೆಯಾದಿರೇಕೆ.
ಸರಳ ಸುಂದರ ಮೃದು ಮಾತಿನಿಂ
ಹೃದಯವಗೆದ್ದು
ಶರಣ ಸಾಹಿತ್ಯದಿ ಇಂಪಿನ ಕಂಠದಿ
ಕಂಪನು ಬೀರಿ ಕಾಣೆಯಾದಿರೇಕೆ.
ಅಸಾಮಾನ್ಯರಾಗಿ ಅದ್ಭುತ ಸಾಧನೆಗೈದು
ಬಸವ ಧ್ವಜವ ಆಕಾಶದೆತ್ತರಕ್ಕೆ
ಹಾರಿಸಬೇಕಾದ ನೀವು
ಬಸವ ಜ್ಞಾನ ಗುರುಕುಲವ
ಅನಾಥಮಾಡಿದಿರೇಕೆ.
ಲವಲೇಶವೂ ಅಹಂಕಾರವಿರದ
ಕಂದ ಈಶನಾಗಿ ಗಂಧ ಬೀರಿ
ಚಂದದಿ ಸಾಗುತ್ತಿದ್ದ ಬಸವರಥವ
ಬಯಲಲ್ಲಿ ಬಯಲುಗೊಳಿಸಿದಿರೆಕೆ.
–ಸವಿತಾ ಮಾಟೂರು ಇಲಕಲ್ಲ