ಮಂಟೂರರಿಗೆ ಶರಣು ಶರಣಾರ್ಥಿ
ಬಸವನ ಸೇವೆಯ ಮಾಡಿ
ಬಸವನ ಭಾವತುಂಬಿ ಹಾಡಿ
ಕಲ್ಲು ಹೃದಯವ ಕರಗಿಸಿ
ಮನದ ಹೂವನ್ನು ಅರಳಿಸಿ
ಪ್ರೀತಿಯ ಹಣತೆಯ ಹಚ್ಚಿ
ವಿನಯಗುಣ ಸರಳತೆಯ ಶರಣರಾಗಿ
ಬಸವತತ್ವದ ಸೊಬಗನ್ನು ಬಿತ್ತಿ
ನಾಡನ್ನು ಶರಣಧರ್ಮದೆಡೆಗೆ ಆಕರ್ಷಿಸಿ
ನೆತ್ತಿಗೆ ಬುತ್ತಿಯನಿಟ್ಟು
ಅಂತರಂಗದ ಮೃದಂಗವ ಕೊಟ್ಟು
ಪುಟ್ಟಹಣತೆ ವಚನ ಹನಿಯನಿಟ್ಟು
ಮಹಾಂತ ಜೋಳಿಗೆ ವಚನ ವೃಕ್ಷ ಕೃತಿ ಕುಸುಮ ಕೊಟ್ಟು
ಪ್ರವಚನ ಭಾಸ್ಕರ,ಪ್ರವಚನ ಪ್ರಭಾಕರ
ಪ್ರವಚನ ಚೇತನ,ಪ್ರವಚನ ಭೂಷಣ
ಕಂಚಿನ ಕಂಠದ ವೀರವಾಣಿ,ಶರಣಶ್ರೀ ಶ್ರೇಷ್ಠ ಕವಿ
ಉತ್ಸಾಹದ ಖಣಿ,ಸಾಹಿತ್ಯದ ಚಿಲುಮೆ
ನೂರಾರು ಬಿರುದು ಪಡೆದರಾಗಿ
ವಿಜಯಮಹಾಂತರ ಕರುಣೆಯ ಪಡೆದು
ಬಸವಜ್ಞಾನ ಗುರುಕುಲ ಸ್ಥಾಪಿಸಿ
ಶರಣ ಸಂಸ್ಕೃತಿ ಉತ್ಸವ ಆಚರಿಸಿ
ನೆಲ ಜಲ,ಕಲೆ ಕೃಷಿ ಸೇವೆಗೈದವರ ಗೌರವಿಸಿ
ಉಸಿರಿರುವ ತನಕ ಬಸವನ ಸೇವೆಯ ಮಾಡುತ
ಬಯಲಾದ ಶಿವಾನುಭವ ಶರಣಚೇತನ
ಯಾಕೆ ತಂದೆ ತಾವು ಮಾಡುವ ಕಾರ್ಯ ಬಹಳನೇ ಇತ್ತು,
ಬಸವ ಬಯಲಲಿ ಒಂದಾಗುವ ಅವಸರವೇನಿತ್ತು.
ಮತ್ತೆ ಹುಟ್ಟಿ ಬನ್ನಿ ಶರಣರೇ,,
–ಸುನಿತಾ ಅಗಡಿ ಇಲಕಲ್ಲ