ಮತ್ತೆ ಬನ್ನಿರಿ ಶರಣರೆ ಬಸವ ವೀಣೆಯು

ಮತ್ತೆ ಬನ್ನಿರಿ ಶರಣರೆ

ಬಸವ ವೀಣೆಯು
ಮೌನ ತಳೆದಿದೆ
ಮಿಡಿವ ವೈಣಿಕನಿಲ್ಲದೆ!

ಶರಣರೆಲ್ಲರ ಕರುಳು
ಮರುಗಿದೆ
ಸರಳ ಸಾತ್ವಿಕ ನಿಲುವ ಕಾಣದೆ!

ಜ್ಞಾನ ಗುರುಕುಲ
ಕತ್ತಲಾಗಿದೆ
ಜ್ಞಾನ ದರಿವಿನ ಸೂರ್ಯನಿಲ್ಲದೆ!

ಬಸವರಥವು
ಚಲಿಸದಾಗಿದೆ
ಕಸುವು ಕಳೆದಿದೆ
ಶರಣ ಸಾರಥಿಯಿಲ್ಲದೆ!

ಮತ್ತೆ ಬನ್ನಿರಿ ಶರಣರೆ
ತತ್ವ ಸಾರಲು ಜನತೆಗೆ
ಬಸವ ಭಾಷೆಯ ಗೆಲುಮೆಗೆ
ಮತ್ತೆ ಬನ್ನಿರಿ ಶರಣರೆ!


ಇಂದುಮತಿ ಅಂಗಡಿ,
ಇಳಕಲ್ಲ.
🙏

Don`t copy text!