ಊರು ಹುನ್ನೂರು, ಮಾತು ಮುನ್ನೂರು

ಶ್ರೀ ಘನಮಠ ಶಿವಯೋಗಿಗಳ 138 ನೆ ಪುಣ್ಯ ಸ್ಮರಣೋತ್ಸವದಲ್ಲಿ ಶರಣ ಈಶ್ವರ ಮಂಟೂರರಿಗೆ ಪೂಜ್ಯ ಗುರುಬಸವ ಮಹಾ ಸ್ವಾಮಿಗಳು ಶ್ರೀ ಮಠದ ವತಿಯಿಂದ ಅರ್ಪಿಸಿದ ನುಡಿ ಸಮರ್ಪಣೆ
ದಿನಾಂಕ 22.12.2017

ಲೋಕದ ಒಪ್ಪು ತಪ್ಪುಗಳನೇಕ
ತಪ್ಪು ತಿದ್ದುವುದಕ್ಕೆ ಬರುವ ಶರಣ ಸಂತತಿ ಅದಕ್ಕೆ ಪ್ರತೀಕ

ವಚನ ಪ್ರವಚನ ಪ್ರವಾಹ ಈ ಭೂಮಿ ಕಂಡ ಅಪ್ಯಾಯಮಾನ
ಬಯಲ ಪ್ರಭುವನು ಎಲ್ಲರಲು
ಕಂಡವಗೆ ಸದಾ ಸನ್ಮಾನ

ಊರು ಹುನ್ನೂರು, ಮಾತು ಮುನ್ನೂರು
ವಚನಗಳಲ್ಲೆ ಮಾತು ನೇಯ್ದ ನೇಕಾರ ಮಂಟೂರು

ತಂದೆ ತಾಯಿಗಳು ನೆಪ, ಶ್ರೀಶೈಲ ಅನ್ನಪೂರ್ಣರ ತಪ
ಮಾತು ಹಾಡಾಗಿಸಲೆಂದು ಉದರದಿ ಹೊರಬಂದ ಈಶ್ವರರೂಪ

ಕರಣಿಕನೊ ವರ್ಣಿಕನೊ, ವಚನ ವಿನಿಮಯಗಾರ
ಪುರಾಣ, ಪ್ರವಚನ, ಭಜನೆ ಕನ್ನಡದ ಕಸುತಿಗಾರ

ಬಸವ ಜ್ಞಾನವೇ ಮೂಲ ವಚನ ಬೆಳಗುವ ತೈಲ
ಶರಣ ಸಂಸ್ಕೃತಿ, ವಚನ ಜ್ಯಾಗೃತಿ ,ನಿಮ್ಮ ಬದುಕಿನ ಜಾಲ

ವಚನಗಳ ಹನಿಸಿ ಕಾವ್ಯ ಕುಸುಮಗಳ ನೂರೊಂದು ನುಡಿ ಕಟ್ಟಿ
ಅನ್ನ, ಆಶ್ರಯ, ವಸ್ತ್ರ, ದಾಸೋಹ, ಪರಿಸರದ ಹತ್ತು ಕನಸಿನ ಬುಟ್ಟಿ

ನಿಮ್ಮ ಮಾತಿನ ಸ್ವರವು ನುಡಿಯ ಮುತ್ತಿನ ಹಾರ
ಗಾಯಕರು, ಚಿಂತಕರು, ಮಧುರ ನಿರ್ವಚನಕಾರ

ನಿಮ್ಮ ಮಾತಿನೆತ್ತರ ವಚನದೆತ್ತರ, ನೀವು ಸ್ನಾತಕೋತ್ತರ
ಹಿಡಿದ ಸಂಶೋಧನೆಗೆ ಪದವಿ, ನೀವೇ ಪ್ರವಚನ ಭಾಸ್ಕರ

ಇದು ಕ್ಷೇತ್ರ ಸಂತೆಕಲ್ಲೂರು ಘನಮಠರ ನೆಲವು, ಇರಲಿ ನಲ್ಮೆಯ ಒಲವು, ನಿಮಗೆ ಬಸವಗೆ ಗೆಲವು.

ರಚನೆ- ಮಹಾಂತೇಶ್ ಮಸ್ಕಿ

 

Don`t copy text!