ಅತಿಥಿ ಉಪನ್ಯಾಸಕರ ಅನಿರ್ದಿಷ್ಠಾವಧಿ ಧರಣಿಗೆ ಮಸ್ಕಿ ಅತಿಥಿ ಉಪನ್ಯಾಸಕರಿಂದ ಬೆಂಬಲ

 

ಅತಿಥಿ ಉಪನ್ಯಾಸಕರ ಅನಿರ್ದಿಷ್ಠಾವಧಿ ಧರಣಿಗೆ ಮಸ್ಕಿ ಅತಿಥಿ ಉಪನ್ಯಾಸಕರಿಂದ ಬೆಂಬಲ

e-ಸುದ್ದಿ ಮಸ್ಕಿ

ಅತಿಥಿ ಉಪನ್ಯಾಸಕರ ಸೇವಾ ವಿಲೀನಾತಿಗಾಗಿ ಆಗ್ರಹಿಸಿ ಧಾರವಾಡದಲ್ಲಿ ನಡೆಯುವ ರಾಜ್ಯ ಸರಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಅನಿರ್ದಿಷ್ಠಾವಧಿ ಧರಣಿಯಲ್ಲಿ ಮಸ್ಕಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರ ಸಂಘ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ಸಂಘದ ರಾಮಣ್ಣ ನಾಯಕ ಹೇಳಿದರು.

ಪಟ್ಟಣದ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾದ ಡಾ,ರಮೇಶ ಮಾಳಗಿಯವರಿಗೆ ಶುಕ್ರವಾರ ಮನವಿ ಪತ್ರವನ್ನು ನೀಡಿ ಮಾತನಾಡಿದರು.

ನಂತರ ಮಾತನಾಡಿದ ಅತಿಥಿ ಉಪನ್ಯಾಸಕ ಸುರೇಶ ಬಳಗಾನೂರು ೧೪ ಸಾವಿರ ಅತಿಥಿ ಉಪನ್ಯಾಸಕರ ಬಹುದಿನದ ಬೇಡಿಕೆಯಾಗಿದ್ದು ಈ ಬಾರಿ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಷನದಲ್ಲಿ ಅತಿಥಿ ಉಪನ್ಯಾಸಕರ ಸೆವಾ ವಿಲೀನಾತಿಮಾಡಲು ನಿರ್ಧರಿಸಬೇಕು ಎಂದು ಒತ್ತಾಯಿಸಿದರು.

ಪ್ರಭುದೇವ ಸಾಲಿಮಠ, ಚನ್ನಬಸವ ವಸ್ತ್ರದ್, ಅಯ್ಯಪ್ಪ ಪಾಮನಕಲ್ಲೂರು, ಚಾಂದಪಾಷಾ ಸೇರಿದಂತೆ ಇತರ ಅತಿಥಿ ಉಪನ್ಯಾಸಕರಿದ್ದರು.

 

Don`t copy text!