ತ್ರಿಪದಿಗಳು

ತ್ರಿಪದಿಗಳು

ಹವಳದ ತುಟಿ ಅರಳಿಸಿ ನಕ್ಕಾಗ ನನ್ನ ಕೂಸು
ಕಮಲದ ಹೂವು ಅರಳ್ಯಾವ// ಕಮಲದ ಹೂ
ನೋಡಿ ಮುಗಿಲೂರ ಸೂರ್ಯ ಚಂದ್ರರು ನಕ್ಕಾರ

ತೊಟ್ಟಲಾಗ ಮಲಗಿಸಿ ಹಿತ್ತಲಾಗ ಹೋದರ
ಚೀರಾಡಿ ಅಳತಾನ ನನ್ನ ಕೂಸ// ಹತ್ತಿರ ಬಂದು
ಎತ್ತಿಕೊಂಡಾಗ ಅಪ್ಕೊಂಡು ಮುತ್ತ ಕೊಡತಾನ

ನಿದ್ಯಾಗ ನಗತಾನ ಎದ್ದಾಗ ಅಳತಾನ
ಆಕಾಶದಾಗ ಚಂದ್ರನ್ನ ನೊಡಿ// ನನ್ನ ಕೂಸ
ಚಂದ್ರ ಬೇಕಂತ ಬೊರ್ಯಾಡಿ ಕಾಡತಾನ

ಅಪ್ಪನ ಮೂಗಂತ ಅವ್ವನ ಕಣ್ಣಂತ
ಹೆಂಗರ ಇರಲೆವ್ವ ನನ್ನ ಕೂಸ //ಚಂದ ಜಗದಾಗ
ದೃಷ್ಟಿ ತಾಗದಾಂಗ ಬೆಳಿಲಿ ಅಂತ ಹರಸರಿ

-ಪ್ರೊ ರಾಜನಂದಾ ಘಾರ್ಗಿ

Don`t copy text!