ಕೈ ಕೋಟೆ ಭದ್ರ ; ಶರಣಗೌಡ ಭಯ್ಯಾಪುರ ಗೆಲುವು
e-ಸುದ್ದಿ ಲಿಂಗಸುಗೂರು
ವಿಧಾನ ಪರಿಷತ್ ಚುನಾವಣೆಯಲ್ಲಿ ಶರಣಗೌಡ ಬಯ್ಯಾಪುರ ಗೆಲುವು ತವರಿನಲ್ಲಿ ಸಂಭ್ರಮಾಚರಣೆ.* ಜಿದ್ದಾ ಜಿದ್ದಿನ ಕಣವಾಗಿ ಏರ್ಪಟ್ಟಿದ್ದ ರಾಯಚೂರು- ಕೊಪ್ಪಳ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಹೋರಬರುತಿದ್ದಂತೆ ಲಿಂಗಸುಗೂರು ಹಟ್ಟಿ,ಮುದಗಲ್ ಪಟ್ಟಣ ಸೇರಿದಂತೆ ನಾನಾ ಭಾಗಗಳಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಿಹಿ ಅಂಚಿ, ಪಟಾಕಿ ಸಿಡಿಸಿ, ಪರಸ್ಪರ ಬಣ್ಣ ಎರಚುವ ಮೂಲಕ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು. ವಿಧಾನ ಪರಿಷತ್ ಚುನಾವಣೆಯಯು ಪಕ್ಷದ ಅಭ್ಯರ್ಥಿಗಳಿಗಿಂತ ಶಾಸಕದ್ವಯರ ನಡುವಿನ ಜಿದ್ದಾ ಜಿದ್ದಿನ ಕಣವಾಗಿತ್ತು ಅಂದರೆ ತಪ್ಪಾಗಲಾರದು . ದೇವದುರ್ಗ ಶಾಸಕರಾದ ಶಿವನಗೌಡ ನಾಯಕ ಮತ್ತು ಕುಷ್ಟಗಿ ಕ್ಷೇತ್ರದ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅವರಿಗೆ ಪ್ರತಿಷ್ಠೆಗೆ ಕಾರಣವಾಗಿತ್ತು. ಶಿವನಗೌಡ ನಾಯಕ ಅವರು ನೂರಕ್ಕೆ ನೂರರಷ್ಟು ತಮ್ಮ ಪಕ್ಷದ ಅಭ್ಯರ್ಥಿ ಗೆದ್ದೆ ಗೆಲ್ಲುವರು ಎಂದು ಚುನಾವಣೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದರು. ಆದರೆ ಚುನಾವಣೆ ಫಲಿತಾಂಶ ಹೋರಬರುತಿದ್ದಂತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವಿನ ನಗೆ ಬೀರಿದರು. ರಾಯಚೂರು-ಕೊಪ್ಪಳ ವಿಧಾನಪರಿಷತ್ ಕ್ಷೇತ್ರದ ಒಟ್ಟು ಮತಗಳು :- 6497
ಒಟ್ಟು ಚಲಾವಣೆಯಾದ ಮತಗಳು – 6488
ಬಿಜೆಪಿ – 2942
ಕಾಂಗ್ರೆಸ್ – 3369
ತಿರಸ್ಕೃತ ಮತಗಳು – 152
ಕಾಂಗ್ರೆಸ್ ಅಭ್ಯರ್ಥಿ ಶರಣಗೌಡ ಬಯ್ಯಾಪುರ ಅವರು 427 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಅಭೂತಪೂರ್ವ ಗೆಲುವೆಗೆ ಕಾರಣರಾದ ಅವಳಿ ಜಿಲ್ಲೆಯ ಮತರಾರಿಗೆ, ಪಕ್ಷದ ಕಾರ್ಯಕರ್ತರಿಗೆ , ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಮಸ್ಕಿ ವರದಿ:
ಮಸ್ಕಿ : ರಾಯಚೂರು ಕೊಪ್ಪಳ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಶರಣೇಗೌಡ ಪಾಟೀಲ್ ಬಯ್ಯಾಪೂರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮ ಆಚರಣೆ ಮಾಡಿದರು.
ಪಟ್ಟಣದ ದೈವದ ಕಟ್ಟೆಯ ಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಯದ್ದಲದಿನ್ನಿ ನೇತೃತ್ವದಲ್ಲಿ ಅನೇಕ ಕಾರ್ಯಕರ್ತರು ಮಂಗಳವಾರ ವಿಜಯೋತ್ಸವ ಆಚರಿಸಿದರು.
ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ , ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರು, ಸಿದ್ದಣ್ಣ ಹೂವಿನಭಾವಿ, ಎಚ್.ಬಿ.ಮುರಾರಿ, ಮೈಬುಸಾಬ ಮುದ್ದಾಪೂರು, ವೆಂಕಟರೆಡ್ಡಿ ಹಾಲಾಪುರ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಡಿ. ಚಿಗರಿ, ಬಸನಗೌಡ ಮುದವಾಳ, ಆನಂದ ವಿರುಪೂರ, ಪಂಪನಗೌಡ ಗುಡದೂರು, ಚಾಂದ್ ಸ್ಮೇಡ್ಮಿ, ಮಲ್ಲಯ್ಯ ಬಳ್ಳಾ, ನಾಗರಬೆಂಚಿ ಮಲ್ಲಪ್ಪ, ಸುರೇಶ್ ಬ್ಯಾಳಿ, ಬಸನಗೌಡ ಮಾರಲದಿನ್ನಿ, ಮಲ್ಲನಗೌಡ್ರು ಗೋನಾಳ, ಶರಣಪ್ಪ ಎಲಿಗಾರ, ಆಲಂಪಾಷ, ಶಿವು ಹಾಗೂ ಇತರರು ಇದ್ದರು.