ನನ್ನೊಳಗಿನ ಅವನು

ನನ್ನೊಳಗಿನ ಅವನು

ನನ್ನಲ್ಲಿ ನೀನು
ನಿನ್ನಲ್ಲಿ ನಾನು
ಹೀಗೇಕೆ ಪ್ರೀತಿಸುತ್ತೇವೆ
ಹಠ ಹಿಡಿದ ಮಕ್ಕಳಂತೆ
ಆನೆಮರಿ ಚಿನ್ನು ಮರಿ
ಮಾಡುವುದೊಂದು ಬಾಕಿ
ಹಠದ ಜಾಯಮಾನ
ನಮ್ಮ ಪ್ರೀತಿಯದ್ದು
ಜಗವನ್ನೇ ಗೆಲ್ಲುವೆನೆಂಬ ಹಮ್ಮು
ಎಲ್ಲವೂ ಕೈಯಳತೆಯಲ್ಲಿ
ಎಂಬ ಬಿಮ್ಮು
ನನ್ನದು ಪದೇಪದೇ ಆತ್ಮಾವಲೋಕನ,
ಅನುಭವಗಳೊಂದಿಗೆ
ಬೇಕಂತಲೇ ಮುಖಾಮುಖಿ, ತಪ್ಪುಗಳ ಸರಿಪಡಿಸುವ
ಅತೀತ ವ್ಯರ್ಥ ಪ್ರಯತ್ನ
ಚಿಕ್ಕಪುಟ್ಟ ವಿಷಯಗಳಲ್ಲಿಯೂ ನನ್ನದು ಅದಮ್ಯ ಪ್ರೀತಿ,
ಸುಳ್ಳೊಂದನ್ನು ಹೊರತಾಗಿಸಿ, ನನ್ನೊಳಗಿನ ಅವನು
ಅವನೊಳಗಿನ ನಾನು
ಒಂದು ಸರಿ
ಒಂದು ತಪ್ಪು
ಒಂದು ಸುಳ್ಳು
ಒಂದು ನಿಜ ಇವೆಲ್ಲವುಗಳ ನಡುವೆ
ಹದವಾಗಿ ಮಿಳಿತಗೊಂಡ
ನಾವುಗಳು
ಸಾಗಬೇಕಿದೆ ಸಮನ್ವಯದ
ಪ್ರೀತಿ ಪಥದೆಡೆಗೆ …….


-ಪ್ರೊ ವಿಜಯಲಕ್ಷ್ಮಿ ಪುಟ್ಟಿ
ಬೆಳಗಾವಿ

Don`t copy text!