ಹಾಜಬ್ಬ
ಹಾಜಬ್ಬ ಹಾಜಬ್ಬ
ಏನಿದು ಹೆಸರು
ಅಬ್ಬಬ್ಬಾ…..
ಉಡಲೊಂದು ಲುಂಗಿ
ಮೇಲೊಂದಂಗಿ
ಬುಟ್ಟಿಯೊಳಿಟ್ಟು
ಮಾರುವರು
ಮೋಸಂಬಿ…..
ಹೆಂಡರು ಮಕ್ಕಳ
ಬದುಕಿಸಲಲ್ಲ
ಹೊಲಮನೆಗಳ
ಮಾಡಲು ಅಲ್ಲ
ಆದರೂ ದುಡಿವರು
ದಣಿವೇ ಇಲ್ಲ
ಏಕೆ ಎಂಬುದ
ಬಲ್ಲವರಿಲ್ಲ
ಓದುವ ಮಕ್ಕಳ
ಶಾಲೆಯ ಕಂಡು
ಕಲಿಯುವ,ಕಲಿಸುವ
ಬವಣೆಗೆ ನೊಂದು
ಹಣ್ಣಿನ ದುಡಿಮೆಯು
ಶಾಲೆಗೆ ಎಂದು
ಕೊಡುತಲೇ ಬಂದರು
ಬಿಡದೇ ಎಂದೂ
ಬಡವನ ಸಿರಿತನ
ಎಲ್ಲರೂ ಕಂಡು
ಬೆರಗಾದರು ನಿಂತು
ಅಬ್ಬಬ್ಬಾ ಎಂದು
ದಿಲ್ಲಿಯಲರಳಿತು
ಹೂವೊಂದು
ಬಯಸದೆ ಸೇರಿತು
ಮುಡಿಗಿಂದು
ಅಬ್ಬಬ್ಬಾ ಅಬ್ಬಬ್ಬಾ
ಹಣ್ಣನು ಮಾರುತ
ಹಾಜಬ್ಬ
ಅಕ್ಷರವ ಹಂಚಿದರು
ಹಾಜಬ್ಬ .
-ಕೆ.ಶಶಿಕಾಂತ
ಲಿಂಗಸೂಗೂರ.