ರಾಜೇಶ್ವರಿ ತೇಜಸ್ವಿಯವರ ಬದುಕಿನ ಪಯಣವೂ..!

ರಾಜೇಶ್ವರಿ ತೇಜಸ್ವಿಯವರ ಬದುಕಿನ ಪಯಣವೂ..!

ರಾಜೇಶ್ವರಿ ತೇಜಸ್ವಿಯವರು 1937 ರಲ್ಲಿ ಬೆಂಗಳೂರಿನ ಕಲಾಸಿಪಾಳ್ಯಂ ಹೊಸ ಬಡಾವಣೆಯಲ್ಲಿ ತೀರಾ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದವರು. ಹೆಣ್ಣು ಮಕ್ಕಳಿಗೂ ತಮ್ಮ ಕಾಲ ಮೇಲೆ ನಿಂತುಕೊಳ್ಳುವ ವಿದ್ಯಾಭ್ಯಾಸ ಕೊಡಬೇಕೆನ್ನುವ ತಮ್ಮ ತಂದೆಯ ಉದಾತ್ತ ಧ್ಯೇಯದಿಂದಾಗಿ ತತ್ವಶಾಸ್ತ್ರದಲ್ಲಿ ಆನರ್ಸ್ ಮತ್ತು ಎಂ.ಎ.ಮಾಡಲು ಮಾನಸ ಗಂಗೋತ್ರಿ ಮೈಸೂರಿಗೆ ಬಂದವರು.

ಅಲ್ಲಿ ಕುವೆಂಪು ಮಗನಾದ ಪೂರ್ಣಚಂದ್ರ ತೇಜಸ್ವಿಯವರ ಪರಿಚಯವಾಗಿ ಪೂಚಂತೆಯವರನ್ನು ಪ್ರೀತಿಸಿದರು ರಾಜೇಶ್ವರಿ ಅವರು.

ಆನಂತರ ತೇಜಸ್ವಿಯವರ ಬದುಕಿನ ದಿಕ್ಕೇ ಬದಲಾಯಿಸಿತು. 1966 ರಲ್ಲಿ ಪೂಜೆಂತೆ ಅವರೊಂದಿಗೆ ವಿವಾಹವಾದರು ಕೂಡ ರಾಜೇಶ್ವರಿ ಅವರು.. ಹೀಗೆಯೇ ಪೂಚಂತೆ ಮತ್ತು ರಾಜೇಶ್ವರಿ ಅವರ ಉತ್ಕಟ ಹಾಗೂ ಉತ್ಕೃಷ್ಟ ಬದುಕು ಸಾಗಿತು.

‘ನನ್ನ ತೇಜಸ್ವಿ’ ರಾಜೇಶ್ವರಿ ಅವರ ಮೊಟ್ಟ ಮೊದಲ ಪುಸ್ತಕವಾಯತು. ಈಗ ಅದು ಐದನೇ ಮುದ್ರಣವನ್ನೂ ಕಂಡಿದೆ ಕೂಡ.

ಇವರ ಹವ್ಯಾಸವೂ ವಿಭಿನ್ನವಾಗಿತ್ತು. ಕ್ರೋಶ-ಟೈಲರಿಂಗ್, ಮೊಮ್ಮಕ್ಕಳು ಮತ್ತು ನೆರೆ ಹೊರೆಯ ಮಕ್ಕಳಿಗೆ Stamp collection. ಇವತ್ತಿಗೆ E-mail ಇದ್ದರೂ ಅಪರೂಪದ Stamp collection ಮಾಡಿದವರು ರಾಜೇಶ್ವರಿ ಪೂಚಂತೆ ಅವರು.

ಇಂತಹ ರಾಜೇಶ್ವರಿ ತೇಜಸ್ವಿಯವರು ಈಗ ನಮ್ಮನ್ನು ಅಗಲಿದ್ದಾರೆ. ಅವರಿಗಿದೋ ನುಡಿ ನಮನಗಳು.

‘ನಮ್ಮ ಮನೆಗೂ ಬಂದರು ಗಾಂಧೀಜಿ’ ಇವರ ಎರಡನೆಯ ಪುಸ್ತಕವಾಗಿತ್ತು. ಪೂಚಂತೆ ಹಾಗೂ ರಾಜೇಶ್ವರಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಇಬ್ಬರೂ ಸಾಫ್ಟ್ ವೇರ್ ಇಂಜಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ರಾಜೇಶ್ವರಿ ತೇಜಸ್ವಿಯವರು ಅಪರೂಪದ ಹವ್ಯಾಸಗಳೊಂದಿಗೆ ಮೂಡಿಗೆರೆಯಲ್ಲಿ ಕಾಫಿ ತೋಟವನ್ನ ನೋಡಿಕೊಳುತ್ತಾ ಇದ್ದವರು.

ಇಂತಹ ರಾಜೇಶ್ವರಿ ತೇಜಸ್ವಿಯವರು ಈಗ ತೀರೀದ್ದಾರೆ. ಅವರ ಕುರಿತು ಒಂದಿಷ್ಟು ನುಡಿ ನಮನವು ಈ ಲೇಖನ.

ಪತಿ, ಕವಿ ಪೂರ್ಣಚಂದ್ರ ತೇಜಸ್ವಿ ನಿಧನ ಬಳಿಕ ಚಿಕ್ಕಮಗಳೂರು ಮೂಡಿಗೆರೆಯ ಹ್ಯಾಂಡ್ ಪೋಸ್ಟ್ ನ ತೋಟದ ಮನೆಯಲ್ಲಿ ಒಬ್ಬರೇ  ವಾಸವಾಗಿದ್ದರು ರಾಜೇಶ್ವರಿ ತೇಜಸ್ವಿಯವರು.  ಅವರ ನೆಚ್ಚಿನ ಹವ್ಯಾಸಗಳ ಜೊತೆ ಕಾಫಿ ತೋಟವನ್ನು ಸಹ ನೋಡಿಕೊಂಡು ಹೋಗುತ್ತಿದ್ದವರು ರಾಜೇಶ್ವರಿ ತೇಜಸ್ವಿಯವರು.

ರಾಷ್ಟ್ರಕವಿ ಕುವೆಂಪು ಅವರ ಸೊಸೆ ಖ್ಯಾತ ಕವಿ, ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ಅವರು ಅನಾರೋಗ್ಯ ಕಾರಣದಿಂದ ಈಗ ತೀರಿದ್ಧಾರೆ.

84 ವರ್ಷದ ರಾಜೇಶ್ವರಿ ತೇಜಸ್ವಿಯವರು ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಕಳೆದ ಮೂರ್ನಾಲ್ಕು ದಿನದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತೀವ್ರ ಜ್ವರದಿಂದ ಬಳಲುತ್ತಿದ್ದ ರಾಜೇಶ್ವರಿ ತೇಜಸ್ವಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತಿತ್ತು, ಆದರೆ ಚಿಕಿತ್ಸೆ  ಫಲಕಾರಿಯಾಗದೇ ಡಿಸೆಂಬರ್ 14 ರಂದು ಕೊನೆಯುಸಿರೆಳೆದಿದ್ದಾರೆ.

ಪತಿ, ಕವಿ ಅದ್ಬುತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ನಿಧನ ಬಳಿಕ ಚಿಕ್ಕಮಗಳೂರು ಮೂಡಿಗೆರೆಯ ಹ್ಯಾಂಡ್ ಪೋಸ್ಟ್ ನ ತೋಟದ ಮನೆಯಲ್ಲಿ ಒಬ್ಬರೇ  ವಾಸವಾಗಿದ್ದರು ರಾಜೇಶ್ವರಿ ತೇಜಸ್ವಿಯವರು.  ಅವರ ನೆಚ್ಚಿನ ಹವ್ಯಾಸಗಳ ಜೊತೆ ಕಾಫಿ ತೋಟವನ್ನೂ ಸಹ ನೋಡಿಕೊಂಡು ಹೋಗುತ್ತಿದ್ದರು. ಆದರೆ ಕಳೆದ ಕೆಲ ದಿನದ ಹಿಂದೆ ಬೆಂಗಳೂರಿನ ಮಗಳ ಮನೆಗೆ ಬಂದಿದ್ದರು. ಕಳೆದ ಮೂರ್ನಾಲ್ಕು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ರಾಜೇಶ್ವರಿ ತೇಜಸ್ವಿಯವರಿಗೆ ಬಿಳಿ ರಕ್ತದ ಕಣಗಳು ಕಡಿಮೆಯಾಗಿದ್ದವು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ರಾಜಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ರಾಜೇಶ್ವರಿ ತೇಜಸ್ವಿಯವರು.

ಕಾಡಿನ‌ಸಂತ, ಕನ್ನಡ ಸಾಹಿತ್ಯ ಲೋಕದ ಮೇರು ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಪ್ರತಿ ಹೆಜ್ಜೆಯಲ್ಲೂ ಜೊತೆಯಾಗಿದ್ದ ರಾಜೇಶ್ವರಿ ತೇಜಸ್ವಿಯವರು ಅವರು ಸಹ ಸಾಹಿತ್ಯ ಲೋಕದಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದರು. ಅಲ್ಲದೇ ತನ್ನ ಪತಿಯ ಬಗ್ಗೆ ‘ನನ್ನ ತೇಜಸ್ವಿ’ ಎಂಬ ಪುಸ್ತಕವನ್ನು ಸಹ ಬರೆದು ಪ್ರಖ್ಯಾತಿಗಳಿಸಿದ್ದವರು ರಾಜೇಶ್ವರಿ ತೇಜಸ್ವಿಯವರು.

ಇಂತಹ ರಾಜೇಶ್ವರಿ ತೇಜಸ್ವಿಯವರು ಈಗ ನಮ್ಮನ್ನು ಅಗಲಿದ್ದಾರೆ. ಅವರಿಗೆ ಶಾಂತಿ ದೊರೆಯಲಿ ಎಂದು ಹಾರೈಸೋಣ..!

ಕೆ.ಶಿವು.ಲಕ್ಕಣ್ಣವರ

Don`t copy text!