—————————————————————————
*ಗಝಲ್*
ನನ್ನೆದೆಯ ಬಿತ್ತಿಯಲಿ ನಿನ್ನದೇ ಛಾಯೆ ದೊರೆ
ಹೊರಹೊಮ್ಮಿದ ಕನಸುಗಳಲ್ಲಿ ನೀನೇ ಮಾಯೆ ದೊರೆ
ಬಾಂದಳದ ಹೃದಯ ವೀಣೆಯಲ್ಲಿ ರಾಗ ನೀನೇ ದೊರೆ
ಗರಿ ಬಿಚ್ಚಿ ಕುಣಿಯುವ ನವಿಲು ನಾಟ್ಯದಲ್ಲಿ ನಿನ್ನದೇ ಛಾಯೆ ದೊರೆ
ಮುಂಜಾವಿನ ಮಂಜಿನ ಹನಿ ಹನಿ ಮುತ್ತುಗಳಲ್ಲಿ ನಿನ್ನದೇ ಛಾಯೆ ದೊರೆ
ನಾ ಬಿಡಿಸಿದ ಬಣ್ಣಬಣ್ಣದ ರಂಗವಲ್ಲಿಯಲ್ಲಿ ನಿನ್ನದೇ ಛಾಯೆ ದೊರೆ
ಕಣ್ಬಿಟ್ಟು ಕಣ್ಣ್ ತೆರೆದು ಪ್ರಕೃತಿಯಲ್ಲಿ ನಿನ್ನದೇ ಛಾಯೆ ದೊರೆ
ತೇವಗೊಂಡ ಸವಿಯ ಕಂಬನಿಯ ಪ್ರತಿ ಹನಿಯಲ್ಲೂ ನೀನೆ ಮಾಯೆ ದೊರೆ
-ಪ್ರೊ . ಸಾವಿತ್ರಿ ಕಮಲಾಪೂರ
ಮೂಡಲಗಿ