ಬಿಜೆಪಿ, ಕಾಂಗ್ರೆಸ್ ಗೆಲುವಿಗೆ ಅಡ್ಡಿಯಾದ ಜೆಡಿಎಸ್
e-ಸುದ್ದಿ ಮಸ್ಕಿ
ಮಸ್ಕಿ: ಪುರಸಭೆಯ 22 ವಾರ್ಡ್ ಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಜೆಡಿಎಸ್ ಅಡ್ಡಿಯಾಗಿದೆ. ಹತ್ತು ಸ್ಥಾನಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಕಣದಲ್ಲಿದ್ದು ಎರಡು ಪಕ್ಷಗಳಿಗೆ ನುಂಗಲಾರದ ತುತ್ತಾಗಿದೆ.
23 ವಾರ್ಡ್ ಗಳಲ್ಲಿ ಒಂದು ವಾರ್ಡ್ ಬಿಟ್ಟು ಉಳಿದ 22 ವಾರ್ಡ್ ಗಳಿಗೆ ಡಿ.27 ರಂದು ಮತದಾನ ನಡೆಯಲಿದೆ. ಬಹುತೇಕ ವಾರ್ಡ್ ಗಳಲ್ಲಿ ನೇರ ಸ್ಪರ್ಧೆ ಇದ್ದರೆ ಮತ್ತೇ ಕೆಲವು ವಾರ್ಡ್ ಗಳಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್,
ಕೆಆರ್ ಎಸ್ ಪಕ್ಷದ ಜೊತೆಗೆ ಪಕ್ಷೇತರರು ಕಣದಲಿದ್ದಾರೆ.
ಭಾನುವಾರ ಬೆಳಿಗ್ಗೆಯಿಂದಲೇ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹಾಗೂ ಬಿಜೆಪಿ ಮುಖಂಡರು 3 ಹಾಗೂ 4 ನೇ ವಾರ್ಡಿನಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಶಾಸಕ ಆರ್. ಬಸನಗೌಡ ತುರ್ವಿಹಾಳ ಹಾಗೂ ಕಾಂಗ್ರೆಸ್ ಮುಖಂಡರು ತಾಲ್ಲೂಕಿನ ಬಳಗಾನೂರು ಪಟ್ಟಣ ಪಂಚಾಯಿತಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದರು.
ಚುನಾವಣೆ ಕಾವು ದಿನದಿಂದ ಹೆಚ್ಚುತ್ತಿದೆ. ಪಕ್ಷದ ಅಧಿಕೃತ ಅಭ್ಯರ್ಥಿಗಳು ಮನೆ ಮನೆ ಭೇಟಿ ನಡೆಸುವ ಮೂಲಕ ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ.
ಬಿಜೆಪಿಯಿಂದ ಜೆಡಿಎಸ್ ಅಭ್ಯರ್ಥಿಗಳಿಗೆ ಆಮೀಷ – ಆರೋಪ
ನಾಮಪತ್ರ ವಾಪಸ್ಸು ಪಡೆಯಲು ಬಿಜೆಪಿಯಿಂದ $ 50 ಲಕ್ಷ ದ ವರೆಗೂ ಆಮೀಷ ನೀಡಿದರೂ ಸಹ ಪಕ್ಷದ ಅಭ್ಯರ್ಥಿಗಳು ಅವರ ಆಮೀಷಗಳಿಗೆ ಒಳಗಾಗದೆ ಚುನಾವಣೆ ಎದುರಿಸುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ರಾಘವೇಂದ್ರ ನಾಯಕ ಆರೋಪಿಸಿದರು.
ಪಟ್ಟಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ‘ನಾನು ಹಿಂದೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ರ ಗರಡಿಯಲ್ಲಿ ಬೆಳೆದಿದ್ದೇನೆ. ಅವರಿಗಾಗಿ ಪಕ್ಷ ಸಂಘಟನೆಗೆ ದುಡಿದಿದ್ದೇನೆ. ಆದರೆ ನಾನು ಕೆಲಸ ಮಾಡಿದ ಹಣವನ್ನು ನೀಡದೇ ಅವರ ಮಕ್ಕಳು ಮೋಸ ಮಾಡಿದರು ಎಂದು ಗಂಭಿರ ಆರೋಪ ಮಾಡಿದರು. ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿವೆ.ತಮಗೆ ಬೇಕಾದ ರೀತಿಯಲ್ಲಿ ಅನುಕೂಲ ಸಿಂಧು ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
19 ನೇ ವಾರ್ಡಿನಲ್ಲಿ ನಾಮಪತ್ರ ತಿರಸ್ಕಾರ ಮಾಡಿಸಿ
ನಾಟಕವಾಡಿದರು. 11ನೇ ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ತಮ್ಮ ನಾಮಪತ್ರವನ್ನೇ ವಾಪಸ್ಸು ಪಡೆದುಕೊಂಡರು ಎಂದರು.
ಜೆಡಿಎಸ್‌ನಿಂದ ಅಭ್ಯರ್ಥಿಗಳನ್ನು ಹಾಕದೇ ಇದ್ದರೆ ಇಂತಿಷ್ಟು ಸೀಟು ಎಂದು ಹಂಚಿಕೊಳ್ಳುತ್ತಿದ್ದರು. ಆದರೆ ಇದಕ್ಕೆ ನಾವು ಅಕವಾಶ ಕೊಡುವುದಿಲ್ಲ. ಜನರ ತೀರ್ಪು ಅಂತಿಮವಾಗಬೇಕು. ಇದಕ್ಕಾಗಿ ಚುನಾವಣೆ ಮೂಲಕ ಜನರ ಮುಂದೆ ಹೋಗುತ್ತಿದ್ದೇವೆ ಎಂದರು.
ಕಾಂಗ್ರೆಸ್, ಬಿಜೆಪಿ ಅಧಿಕಾರ ಅವಧಿಯ ಭ್ರಷ್ಟಾಚಾರವನ್ನು ಜನರ ಮುಂದೆ ತಿಳಿಸಿ ವೋಟು ಕೇಳುತ್ತೇವೆ ಎಂದರು.
ಮುಖಂಡರಾದ ಮಲ್ಲಿಕಾರ್ಜುನ ಭಾವಿಕಟ್ಟಿ, ಮೌನೇಶ ಬಳಗಾನೂರು, ಮಂಜುನಾಥ ಗದ್ದಿಗೌಡ್ರ, ದುರುಗೇಶ ಗುಡಿಸಲಿ, ಅರುಣಕುಮಾರ ಗುಡಿಸಲಿ, ನಾಗರಾಜ ಹಂಚಿನಾಳ, ಸಿಕಂದರ್, ಯಮನೂರು ನಾಯಕ ಸೇರಿ ಇತರರು ಇದ್ದರು.