ಡಿ. 25 ರಂದು ತಲೇಖಾನದಲ್ಲಿ ‘ಹಗೆ ಸಾಕು-ನಗೆ ಬೇಕು’ ಕಾರ್ಯಕ್ರಮ
e-ಸುದ್ದಿ ಮಸ್ಕಿ
‘ಹಗೆ ಸಾಕು-ನಗೆ ಬೇಕು’ ವಿನೂತನ ಕಾರ್ಯಕ್ರಮವನ್ನು ತಾಲ್ಲೂಕಿನ ತಲೇಖಾನ ಗ್ರಾಮದಲ್ಲಿ ಡಿ. 25 ರಂದು ಸಂಜೆ 6 ಗಂಟೆಗೆ ಭೀಮಸೇನರಾವ್, ಅಮೃತಾಬಾಯಿ, ಗೋಪಾಲಕೃಷ್ಣರಾವ್, ವಿಠ್ಠಲರಾವ್, ಶ್ರೀನಿವಾಸ್ ರಾವ್ ಕುಲಕರ್ಣಿ ಪ್ರತಿಷ್ಠಾನದಿಂದ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ಸ್ವಾಮೀರಾವ್ ಕುಲಕರ್ಣಿ ತಿಳಿಸಿದ್ದಾರೆ.
ಮಸ್ಕಿ ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.
ತಲೇಖಾನ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮದ ಸಾನಿದ್ಯವನ್ನು ಅಭಿನವ ಬಸವರಾಜೇಂದ್ರ ಸ್ವಾಮೀಜಿ ವಹಿಸಲಿದ್ದಾರೆ, ಹಿರಿಯ ಸಾಹಿತಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಸ್ವಾಮೀರಾವ್ ಕುಲಕರ್ಣಿ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಸ್ಯ ಕಲಾವಿದ ಪ್ರಾಣೇಶ ಗಂಗಾವತಿ ಹಾಗೂ ಜಿಲ್ಲಾ ಕಸಾಪದ ನೂತನ ಅಧ್ಯಕ್ಷ ರಂಗಣ್ಣ ಅಳ್ಳುಂಡಿ ಅವರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಾಹಿತಿ ಮಹಾಂತೇಶ ಮಸ್ಕಿ, ಗುಂಡುರಾವ್ ದೇಸಾಯಿ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಾಣೇಶ ಗಂಗಾವತಿ, ನರಸಿಂಹ ಜ್ಯೋಷಿ ಹಾಗೂ ಮಹಾಮನಿ ತಂಡದಿಂದ ‘ಹಗೆ ಸಾಕು-ನಗೆ’ ಬೇಕು ಹಾಸ್ಯ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಮಸ್ಕಿ ಠಾಣೆಯಲ್ಲಿ ಗುರು ಶಿಷ್ಯರ ಸಮ್ಮೀಲನ
ಖಾಸಗಿ ಕೆಲಸದ ನಿಮಿತ್ತ ಭಾನುವಾರ ಪಟ್ಟಣದ ಪೊಲೀಸ್ ಠಾಣೆಗೆ ಆಗಮಿಸಿದ್ದ ಸಾಹಿತಿ ಡಾ. ಸ್ವಾಮೀರಾವ್ ಕುಲಕರ್ಣಿ ಅವರು ಆಗಮಿಸಿದ ವೇಳೆ ಅಚ್ಚರಿ ಕಾದಿತ್ತು. ಠಾಣೆಯ ಸಬ್ ಇನ್ ಸ್ಪೆಕ್ಟರ್ ಸ್ವಾಮಿರಾವ್ ಕುಲಕರ್ಣಿ ಅವರ ಪಕ್ಕ ಶಿಷ್ಯರಾಗಿದ್ದರು.
ಕಲಬುರ್ಗಿಯ ನೂತನ ವಿದ್ಯಾಲಯದಲ್ಲಿ ಡಾ. ಸ್ವಾಮೀರಾವ್ ಕುಲಕರ್ಣಿ ಅವರ ಶಿಷ್ಯರಾಗಿದ್ದ ಸಬ್ ಇನ್ ಸ್ಪೆಕ್ಟರ್ ಸಿದ್ಧರಾಮ ಬೀದರಾಣಿ ನೆಚ್ಚಿನ ಗುರುಗಳನ್ನು ಕಂಡು ಎದ್ದು ನಿಂತರು, ಶಾಲು ಹೋದಿಸಿ ಸನ್ಮಾನಿಸಿದರು. ಗುರುಗಳ ಕಾಲಿಗೆ ಬಿದ್ದು ನಮಸ್ಕರಿಸಿದರು. ಶಿಷ್ಯನನ್ನು ಅಲಂಗಿಸಿಕೊಂಡ ಡಾ. ಸ್ವಾಮಿರಾವ್ ಕುಲಕರ್ಣಿ ಒಂದು ಕ್ಷಣ ಭಾವುಕರಾದ ಘಟನೆಯೂ ನಡೆಯಿತು.
ಗುರು ಶಿಷ್ಯರ ಅಪರೂಪದ ಮಿಲನಕ್ಕೆ ಸಾಹಿತಿಗಳಾದ ಮಹಾಂತೇಶ ಮಸ್ಕಿ. ಗುಂಡುರಾವ್ ದೇಸಾಯಿ, ಆದಪ್ಪ ಹೆಂಬಾ ಸೇರಿದಂತೆ ಠಾಣೆಯ ಸಿಬ್ಬಂದಿ ಸಾಕ್ಷಿಯಾದರು.