ಹಟ್ಟಿ ಪಟ್ಟಣದಲ್ಲಿ ಮೂಲಭೂತ ಸೌಲಭ್ಯಕ್ಕಾಗಿ ಧರಣಿ.
e-ಸುದ್ದಿ ಮಸ್ಕಿ
ಹಟ್ಟಿ ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ CITU ಹಟ್ಟಿ ಘಟಕದ ಹಾಗೂ ಇತರ ಸಂಘಟನೆಗಳ ನೆತೃತ್ವದಲ್ಲಿ ಮೂಲಭೂತ ಸೌಕರ್ಯಗಳಿಗಾಗಿ ಧರಣಿ ಸತ್ಯಾಗ್ರಹ ನಡೆಸಲಾಯಿತು.ಹಟ್ಟಿ ಪಟ್ಟಣ ಪಂಚಾಯಿತಿಯಾಗಿ ಮೆಲ್ದರ್ಜೆಗೆರಿದರೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ ಕುಡಿಯುವ ನೀರಿಗಾಗಿ ನಾಗರಿಕರು ಪರಿತಪಿಸುವಂತಾಗಿದ್ದು ಪ್ರತಿ ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು ಈ ಸಮಸ್ಯೆಗೆ ಇದುವರೆಗೂ ಪರಿಹಾರವೇ ಇಲ್ಲದಂತಾಗಿದ್ದು ಆಡಳಿತ ಮಂಡಳಿಯ ವಿರುದ್ದ ಜನ ಹಿಡಿಶಾಪ ಹಾಕುವಂತಾಗಿದೆ. ಬಸ್ ನಿಲ್ದಾಣದಲ್ಲಿ ಬಸ್ ಸೆಲ್ಟರ್ ದುರಸ್ತಿಗೊಳಿಸಿ ಪ್ರಯಾಣಿಕರಿಗೆ ಕೂಡಲು ಆಸನಗಳ ವ್ಯವಸ್ಥೆ ಮಾಡಬೇಕು, ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛತೆ ಮಾಡಬೇಕು, ಈಗಾಗಲೇ ನಿರ್ಮಿಸಿದ ರಸ್ತೆಗಳು ಕಳಪೆ ಗುಣಮಟ್ಟದಿಂದ ಕುಡಿದ್ದು ಮರು ದುರಸ್ತಿ ಗೋಳಿಸಬೇಕು,ಬಹುತೇಕ ವಾರ್ಡಿನ ರಸ್ತೆಗಳು ತುಂಬಾ ಹದಗೆಟ್ಟಿದ್ದು ಅವೆಲ್ಲವುಗಳನ್ನು ರಿಪೇರಿ ಮಾಡಬೇಕು. ಒಂದು ವಾರದ ಒಳಗೆ ಈ ಎಲ್ಲಾ ಸಮಸ್ಯೆಗಳು ಬಗೆಹರಿಯದಿದ್ದರೆ ಪಟ್ಟಣ ಪಂಚಾಯಿತಿ ಕಾರ್ಯಾಲಯಕ್ಕೆ ಬೀಗ ಜಡಿದು ಮುತ್ತಿಗೆ ಹಾಕಲಾಗುವದೆಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ CITU ನ ಬಸವರಾಜ ಮಲ್ಲಾಪುರ,ಎಂ.ಸಿ.ನಿಂಗಪ್ಪ ಎನ್.ಗುರುಪಾದಪ್ಪ ನಾಯಿಕೊಡಿ, ವೀರನಗೌಡ ಅನ್ವರಿ, ರಮೇಶ್ ವಿರಾಪುರ,ಪಕ್ರುದ್ದಿನ್, ಹನಿಫ್, ನಿಂಗಪ್ಪ ಗೌಡನಬಾವಿ ಸೇರಿದಂತೆ ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.