ಲಯನ್ಸ್ ಕ್ಲಬ್ ಸದಸ್ಯದರಿಂದ ಸ್ವೇಟರ್ ವಿತರಣೆ

ಲಯನ್ಸ್ ಕ್ಲಬ್ ಸದಸ್ಯದರಿಂದ ಸ್ವೇಟರ್ ವಿತರಣೆ

e-ಸುದ್ದಿ ಮಸ್ಕಿ

ಮಸ್ಕಿ : ಲಯನ್ಸ್ ಕ್ಲಬ್ ನ ಪದಾಧಿಕಾರಿಗಳು ಹಾಲು ಮತ್ತು ಪೇಪರ್ ಹಂಚುವ ಹುಡುಗರಿಗೆ ಸ್ವೆಟ್ಟರ್ ವಿತರಣೆ ಮಾಡಿದರು.
ಪಟ್ಟಣದ ಲಯನ್ಸ್ ಶಾಲೆಯಲ್ಲಿ ಶನಿವಾರ ೨೦ ವಿದ್ಯಾರ್ಥಿಗಳಿಗೆ ಸ್ವೇಟರ್ ವಿತರಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಸಿದ್ದಲಿಂಗಯ್ಯ ಸೊಪ್ಪಿಮಠ ಮಾತನಾಡಿ ಚಳಿಗಾಲದಲ್ಲೂ ವಿದ್ಯಾರ್ಥಿಗಳು ಬೆಳಿಗ್ಗೆ ಚಳಿಯನ್ನು ಲೆಕ್ಕಿಸದೆ ಪತ್ರಿಕೆ ಮತ್ತು ಹಾಲನ್ನು ಸರಿಯಾದ ಸಮಯಕ್ಕೆ ವಿತರಿಸಿ ಕಾಯಕ ನಿಷ್ಠೆ ಪ್ರದರ್ಶಿಸುತ್ತಾರೆ. ಅದರಲ್ಲು ಪತ್ರಿಕೆ ಹಂಚುವ ವಿದ್ಯಾರ್ಥಿಗಳು ಬಡತನದಲ್ಲಿರುತ್ತಾರೆ. ವಿದ್ಯಾರ್ಥಿಗಳ ಸೇವಾ ನಿಷ್ಠೆಗೆ ಲಯನ್ಸ್ ಕ್ಲಬ್ ಸದಾ ಅವರ ಸಂಕಷ್ಟಕ್ಕೆ ಸ್ಪಂದಿಸುತ್ತದೆ ಎಂದರು.
ಡಾ.ಬಿ.ಎಚ್.ದಿವಟರ್, ಡಾ.ಮಲ್ಲಿಕಾರ್ಜುನ ಇತ್ಲಿ ಮಾತನಾಡಿದರು. ಡಾ.ಮಲ್ಲಿಕಾರ್ಜುನ ಶಟ್ಟಿ. ಬಸವಲಿಂಗ ಶಟ್ಟಿ, ಶಿವರಾಜ್ ಇತ್ಲಿ, ಮುಖ್ಯಗುರು ದೊಡ್ಡಪ್ಪ ಹಾಗೂ ಇತರರು ಇದ್ದರು

Don`t copy text!