ಶ್ರೀ ವಿಶ್ವಚೇತನ ಕನಕದಾಸ ಕುರುಬರ ಅಭಿವೃದ್ಧಿ ಸಂಘದಿಂದ ಪ್ರತಿಭಟನೆ
e-ಸುದ್ದಿ ಮಸ್ಕಿ
ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಮೂರ್ತಿಗೆ ಅಪಮಾನ ಮತ್ತು ಕನ್ನಡ ಬಾವುಟ ಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬೃಹತ್ ಬೈಕ್ ರ್ಯಾಲಿ ಮಾಡಲಾಗುವುದು ಎಂದು ಕುರುಬ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಗೌಡ ಸುಂಕನೂರು ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು ಬೆಳಗಾವಿಯಲ್ಲಿ ಸ್ವಾತಂತ್ರ್ಯ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ಧ್ವಂಸಗೊಳಿಸಿ ನಾಡಧ್ವಜಕ್ಕೆ ಬೆಂಕಿ ಹಚ್ಚಿ ಕಾನೂನು ಸುವ್ಯವಸ್ಥೆ ಹದೆಗೆಡಸಿದ ಶಿವಸೇನೆ.ಎಂಇಎಸ್ ಸಂಘಟನೆಗಳನ್ನು ಕರ್ನಾಟಕದಲ್ಲಿ ನಿಷೇಧಿಸಲು ಆಗ್ರಹಿಸಿ ಪುಂಡರನ್ನು ಕಠಿಣ ಶಿಕ್ಷೆಗೊಳಪಡಿಸುವಂತೆ ಒತ್ತಾಯಿಸಿ ಬುಧವಾರ ಶ್ರೀ ವಿಶ್ವಚೇತನ ಕನಕದಾಸ ಕುರುಬರ ಅಭಿವೃದ್ಧಿ ಸಂಘ ದಿಂದ ಬೆಳಿಗ್ಗೆ ೧೯-೩೦ ಕ್ಕೆ ಬೈಕ್ ರ್ಯಾಲಿ ನಡೆಸುವುದಾಗಿ ತಿಳಿಸಿದರು.
ಪಟ್ಟಣದ ಗಾಂಧೀನಗರದ ಗಾಂಧಿ ಪುತ್ಥಳಿಯಿಂದ ತಹಶೀಲ್ದಾರ್ ಕಾರ್ಯಾಲಯದವರೆಗೆ ಬೃಹತ್ ಬೈಕ್ ರ್ಯಾಲಿ ಮೂಲಕ ತೆರಳಿ ತಹಶೀಲ್ದಾರ್ ಮೂಲಕ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಅರಗ ಜ್ಞಾನೆಂದ್ರ ಅವರಿಗೆ ಮನವಿಯನ್ನು ಸಲ್ಲಿಸಲಾಗುವುದು ಎಂದು ವಿವರಿಸಿದರು.
ದುರುಗಪ್ಪ ವಕೀಲರು ಕ್ಯಾತ್ನಟ್ಟಿ .ಮಲ್ಲಿಕಾರ್ಜುನ ಗೌಡನಭಾವಿ.ನಾಗರೆಡ್ಡೆಪ್ಪ ಬುದ್ದಿನ್ನಿ.ಬಸವರಾಜ ಗೌಡನಭಾವಿ. ಮತ್ತಿತರರು ಉಪಸ್ಥಿತರಿದ್ದರು