ಜೀವನ
ಅದ್ಭುತ ಅನುಭವ ನೀಡುತ್ತ,
ನವ ಚೈತನ್ಯ ತುಂಬುತ್ತಾ,
ನೋವನ್ನು ಮರೆಸುತ್ತ.
ನಗುವನ್ನು ನೀಡುತ್ತ
ಸುಂದರ ಪ್ರತೀ ದಿನ
ಸಾಗುತ್ತಿದೆ
ಹಾವ ಭಾವಗಳ ತಳಕು
ಜೊತೆಗಿಷ್ಟು ವಾಸ್ತವದ ತಳಕು
ನೀರಸ ವಿವಿಧರಸಗಳ ತಳಕು
ಸ್ನೇಹದ ಸಿಂಚನದ ಹೊಳಪು
ಹೃದಯದ ಕರವದ ತಳಕು
ಪ್ರತಿ ದಿನ ಸಾಗುತ್ತಿದೆ
ಅದೇ ನಿತ್ಯ ಜೀವನದ ಜಂಜಾಟ
ಜೊತೆಗಿಷ್ಟು ಸಜ್ಜನರ ಸಂಗಾಟ..
ಭಾವ ಕಾಣುವುದೇ ನವ ಚೈತನ್ಯ
ಕೈ ಬೀಸಿ ಕರೆಯುತ್ತಿದೆ ಪ್ರತಿ ದಿನ,ಹೊಸ ಬೆಳಕು
ಸಾಗುತ್ತಲೇ ಇದೆ
ಸೃಷ್ಟಿಯ ಸೊಬಗು ಅವರ್ಣನೀಯ
ಮನಸಿನ ಸೊಬಗು ಅವರ್ಣಿಯ
ಹೊಸ ವರ್ಷದ ಮೊದಲ ಹೆಜ್ಜೆಗಳು
ಹೊಸದಾಗಿರಲಿ ಸಾಗಲಿ ಹಾಗೆಯೆ
ನವ ಚೈತನ್ಯ ಚಿಲುಮೆ ತುಂಬಿ ಪ್ರತಿ ದಿನ ಸಾಗತ್ತಲೆ ಇರಲಿ
ತಾಳ ಮೇಳ ಗೊತ್ತಿಲ್ಲದ ಹೃದಯ..
ಮನಸಿನ ಭಾವಕ್ಕೆ ಅಕ್ಷರದ ರೂಪ
ಸಾಹಿತ್ಯದ ಯಾವುದೇ ಸೀಮೆ ಇಲ್ಲದೆಯೇ ಮೂಡಿದ ಕವನ…
ಮನ ಬಂದಂತೆ ಬರೆದ ಸಾಲು
ಪ್ರತಿ ದಿನ ಸಾಗಲಿ ಜೀವನ
ವರವೋ ಶಾಪವೋ ಜೀವನ ಶೈಲಿ!!?
ನಿನ್ನ ಮೇಲೆ ನಿಂತಿದೆ ಉತ್ತರಾ ಸಜ್ಜನಿಕೇ ಇದ್ದರೆ ವರವಾಗಿ ಜೀವನ.
ದುರ್ಗುಣಿ ಆದ್ರೆ ಶಾಪ ಈ ಬದಕು.
ಸಾಮರಸ್ಯ ತುಂಬಿದ್ರೆ,ನಿತ್ಯ ಜೀವನದ ಸಂಜೀವನಿ ಈ ಬಾಳು
-✍️ಕವಿತಾ ಮಳಗಿ
ಕಲಬುರ್ಗಿ