ಯುಗ ಪುರುಷ ಕುವೆಂಪು
e-ಸುದ್ದಿ ಬೆಳಗಾವಿ
ಕಾವ್ಯ ಕೂಟ ಕನ್ನಡ ಬಳಗ ಜಿಲ್ಲಾ ಘಟಕ ಬೆಳಗಾವಿ ವತಿಯಿಂದ ಆಯೋಜಿಸಿದ್ದ ರಾಷ್ಟ್ರ ಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ
ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು.೩೦ ಜನ ಸದಸ್ಯರು ಕುವೆಂಪು ಅವರ ಕವನ ವಾಚನ ಹಾಗೂ ಗಾಯನ ಮಾಡಿದರು.
ಕಾರ್ಯಕ್ರಮದ ಪ್ರಾರಂಭಕ್ಕೆ ಕು.ಮಂಜುಶ್ರೀ ಹಾವಣ್ಣವರ ಪ್ರಾರ್ಥನೆ ಮಾಡಿದರು. ಶ್ರೀಮತಿ ಆಶಾ ಯಮಕನಮರಡಿ
ಇವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತನಾಡುತ್ತಾ ರಾಷ್ಟ್ರಕವಿ ಕುವೆಂಪು ಅವರ ಬದುಕು ಹಾಗೂ ಬರಹಗಳೆರಡು ವೈಚಾರಿಕ ಹಾಗೂ ತತ್ವನಿಷ್ಠೆಯ ಪರಿಪಾಲನೆಇಂದ ಕೂಡಿದ್ದವು. ವರ್ಗಭೇಧ ಅಳಿಸುವಲ್ಲಿ ಸರಳ ಜೀವನಕ್ರಮವಾಗಿ ಮಂತ್ರ ಮಾಂಗಲ್ಯ ವಿವಾಹ ಪದ್ಧತಿಯ ಹರಿಕಾರರಾಗಿ
ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವಲ್ಲಿ ಶ್ರಮವಹಿಸಿದ ಶ್ರೇಷ್ಠ ಸಾಹಿತಿಯಾಗಿ ಕನ್ನಡ ಭಾಷಾ ಸಾಹಿತ್ಯವಲಯಕ್ಕೆ ಮೊಟ್ಟಮೊದಲ ಬಾರಿಗೆ ಜ್ಞಾನ ಪೀಠ ಪ್ರಶಸ್ತಿ ತಂದುಕೊಟ್ಟ ಜಗದ ಕವಿ ಯುಗದ ಕವಿ ಕುವೆಂಪು ಅವರಿಗೆ ಸಲ್ಲುತ್ತದೆ ಎಂದು ಮಾತನಾಡಿ ಕಾರ್ಯಕ್ರಮಕ್ಕೆ ಉಪಸ್ಥಿತರಿದ್ದ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಶ್ರೀಮತಿ ವಿದ್ಯಾ ಹುಂಡೇಕಾರ ಅತ್ಯಂತ ಸುಂದರವಾಗಿ ನಿರೂಪಣೆ ಮಾಡಿದರು.ಶ್ರೀಮತಿ ನಿರ್ಮಲಾ ಪಾಟೀಲ್ ವಂದನಾರ್ಪಣೆ ಮಾಡಿದರು.
ಕಾರ್ಯಕ್ರಮ ಯಶಸ್ವಿಗೊಳ್ಳಲು ಸಹಕರಿಸಿದ ಎಲ್ಲರಿಗೂ ಬಳಗದ ವತಿಯಿಂದ ಧನ್ಯವಾದಗಳು🙏🏻