ಮಸ್ಕಿ : ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕರೊನಾ ಸೇನಾನಿಗಳಿಗೆ ಆರೋಗ್ಯ ಸಹಾಯ ಕಿಟ್‍ಗಳನ್ನು ಬುಧವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ ವಿತರಿಸಿದರು.
ಕರೊನಾ ಸೇನಾನಿಗಳು ತಮ್ಮ ಜೀವದ ಹಂಗು ತೊರೆದು ಕರೊನಾ ಪೀಡಿತರೊಂದಿಗೆ ಆರೈಕೆ ಮಾಡುತ್ತಾರೆ. ಅವರ ಜೀವವು ಅಮುಲ್ಯವಾಗಿದ್ದು ರಕ್ಷಣೆಗಾಗಿ ಕಿಟ್‍ಗಳನ್ನು ಪಕ್ಷದ ವತಿಯಿಂದ ವಿತರಿಸಿದರು.
ಜಿ.ಪಂ. ಮಾಜಿ ಸದಸ್ಯ ಎಚ್.ಬಿ.ಮುರಾರಿ ಮಾತನಾಡಿ ಕರೊನಾ ಸೇವಾನಿಗಳಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಕ್ಷದ ಬಲವರ್ಧನೆಗಾಗಿ ದುಡಿಯಬೇಕು ಎಂದರು.
ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ, ನಾಗನಗೌಡ ಶಾವಂತಗೇರ, ಶೇಖರಗೌಡ ಜಾಲಿ, ಮೈಬೂ ಸಾಬ ಮುದ್ದಾಪುರ, ಬಸನಗೌಡ ಮಾರಲದಿನ್ನಿ, ಸುರೇಶ ಬ್ಯಾಳಿ, ಶರಣಪ್ಪ ಎಲಿಗಾರ ಹಾಗೂ ಇತರರು ಭಾಗವಹಿಸಿದ್ದರು.