ಮಸ್ಕಿ : ದೇವಿ ಪುರಾಣದಲ್ಲಿ ವಿಜ್ಞಾನ ಮತ್ತು ಆಧ್ಯತ್ಮ ಮಿಳಿತವಾಗಿದ್ದು ಮನುಷ್ಯನ ಸಾಮಾಜಿಕ ಬದುಕಿನಲ್ಲಿ ವಯಕ್ತಿಕ ಸಾಧನೆಗೆ ದೇವಿ ಪುರಾಣದ ಅಧ್ಯಯನ ದಾರಿ ದೀಪವಾಗಿದೆ ಎಂದು ವೀರಾಪುರ ಹಿರೇಮಠದ ಡಾ.ಮರುಳಸಿದ್ಧ ಪಂಡಿತರಾಧ್ಯ ಶಿವಾಚಾರ್ಯರು ಹೇಳಿದರು.
ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ವಿಶೇಷ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಚಿದಾನಂದ ಅವಧೂತರು ದೇವಿಯನ್ನು ಸಾಕ್ಷತ್ಕರಿಸಿಕೊಂಡು ದೇಹದ ರಚನೆ ಅವುಗಳ ಕಾರ್ಯ ವಿಧಾನಕ್ಕೆ ಉಸಿರಾಟದ ಮಹತ್ವ ಮತ್ತು ಆಧ್ಯತ್ಮ ಸಾಧನೆಗೆ ಬೇಕಾದ ತಂತ್ರಗಳನ್ನು ದೇವಿ ಪುರಾಣದಲ್ಲಿ ತಿಳಿಸಿದ್ದರೆ.
ಮನುಷ್ಯ ತನ್ನಲ್ಲಿರುವ ಜಾಗೃತ ಶಕ್ತಿಯನ್ನು ಕ್ರೂಢಿಕರಿಸಿಕೊಂಡು ಸಾಧನೆ ಮಾಡಿದರೆ ನುಡಿದಂತೆ ನಡೆಯುವ ಪ್ರಕ್ರಿಯೇ ಆರಂಭವಾಗುತ್ತದೆ ಅದಕ್ಕೆ ದೈವತ್ವದ ಪರಿಕಲ್ಪನೆ ಮೂಡುತ್ತದೆ ಎಂದು ಡಾ.ಮರುಳಸಿದ್ಧ ಪಂಡಿತರಾಧ್ಯ ಶಿವಾಚಾರ್ಯರು ತಿಳಿಸಿದರು.
ಪ್ರತಿಯೊಬ್ಬರು ಯಾವುದೇ ಕೆಲಸ ಯಶಸ್ವಿಯಾಗಬೇಕಾದರೇ ಇಚ್ಛಾಶಕ್ತಿ, ಕ್ರೀಯಾಶಕ್ತಿ, ಜ್ಞಾನ ಶಕ್ತಿಗಳು ಒಗ್ಗೂಡಬೇಕು. ಆಗ ಮಾತ್ರ ಯಶಸ್ವಿ ಸಾಧ್ಯ ಎಂದರು.
ಮಸ್ಕಿ ಗಚ್ಚಿನ ಹಿರೇಮಠದ ಶ್ರೀವರರುದ್ರಮುನಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಅಂಕುಶದೊಡ್ಡಿಯ ಶ್ರೀವಾಮದೇವ ಶಿವಾಚಾರ್ಯರು, ನಂದಿಕೇಶ್ವರದ ಶಿವಾಚಾರ್ಯರು ಇದ್ದರು.