ಹೊಸ ವರ್ಷ ೨೦೨೨
ಗಡಿಯಾರದ
ಮುಳ್ಳು ಸರಿದು
ಹೊಸ ವರ್ಷಕಾಲಿಟ್ಟಿದೆ
ಸೂರ್ಯೋದಯ
ಹೊಸ ಭರವಸೆ ಕನಸುಗಳ
ಹೊತ್ತು ಬರುತಿದೆ
ಪ್ರೀತಿ ಸ್ನೇಹಗಳ
ತುಂಬಿದೆದೆಯಿಂದ ಸ್ವಾಗತಿಸಿ
ಕಿತ್ತೊಗೆದು ಎಲ್ಲ ಕ್ಲೇಷಗಳ
ಮಾನವೀಯತೆ ಬೀಜ
ಬಿತ್ತೋಣ
ಹಸಿದವರಿಗೆ ಅನ್ನ ನೀರು
ನೊಂದವರಿಗೆ ಸ್ವಾಂತನದ
ನಲ್ನುಡಿಯನಾಡುತ
ಆಸರೆಯ ಹುಲ್ಲು
ಕಡ್ಡಿಯಾಗೊಣ
ಜಗದ ಜಂಜಾಟದಲ್ಲಿ
ಕಳೆದುಕೊಳ್ಳದೆ ನಮ್ಮ
ಹುಡುಕೊಣ
ಹಗಲಿಗೊಂದಿಷ್ಟು ಕಾರ್ಯತತ್ಪರತೆ
ರಾತ್ರಿಗೊಂದಿಷ್ಟ ಕನಸುಗಳ
ಸಾಕಾರಗೊಳಿಸಲು
ಬತ್ತದ ಉತ್ಸಾಹದಲ್ಲಿ ಶ್ರಮಿಸೊಣ
–ಡಾ. ನಿರ್ಮಲ ಬಟ್ಟಲ