ಹೊಸ ವರುಷ

ಹೊಸ ವರುಷ

ಹೊಸ ವರುಷದಿ
ಹೊಸ ಕನಸ ಹೊತ್ತು
ಹೊಸ ದಿಗಂತದೆಡೆಗೆ ಸಾಗಿ
ಹೊನ್ನ ಹೂ ರಾಶಿ ಹಾಸಿ
ಹರುಷತರಲೆಂದು ಹದುಳಗೈಯೋಣ.

ಸೋಲು ಗೆಲುವು ಕಂಡೆವು
ನೋವು ನಲಿವು ಉಂಡೆವು
ಅಪ್ಪನ ಅಗಲಿಕೆಯ ನೋವು
ಅಚ್ಚಳಿಯದಾಯ್ತು ಹಳೆವರುಷವು.

ಹಳೆ ಕೊಳೆಯು ಕಳೆದು
ಹೊಸ ಬೆಳೆಯು ಬೆಳೆದು
ಸಮೃದ್ಧಿಯಲಿ ಹೊಳೆದು
ಪ್ರಗತಿಯ ಬಸವ ಬೆಳೆಯ ಬೆಳೆಯುವಾ.

ನೋವು ಕಳೆದು ನಲಿವು ನೀಡಿ
ಹೊಸ ಹೆಜ್ಜೆಗೆ ಮೆಟ್ಟಿಲಾಗಿ
ಹೊಸ ಉತ್ಸಾಹದಿ ಬರಲಿ
ಹೊಸ ವರುಷವು ಜಗಕೆ
ವಿಜಯಮಹಾಂತನ ಪಾದಕೆ.

ಸವಿತಾ. ಮಾಟೂರ. ಇಲಕಲ್ಲ.

Don`t copy text!