ಹಲಸಲು ಹೊಸ ವರ್ಷ

ಹಲಸಲು ಹೊಸ ವರ್ಷ

ಬಂದಿತೇಕೋ ಈ ವರ್ಷ ನೋವಿನಲಿ
ಕಳೆದುಕೊಂಡರು ಶೀಲ ದೌರ್ಜನ್ಯದಲಿ
ದಾಸ್ಯದಿ ಬೆತ್ತಲೆಯಾಗಿ ಬಾಯಿ ತೆರೆಯಲಿಲ್ಲ
ಶತಶತಮಾನಗಳಿಂದ ಬದುಕು ಕೇರಿಯಲಿ

ತುತ್ತು ಅನ್ನಕ್ಕಾಗಿ ತುಂಡು ಬಟ್ಟೆಗಾಗಿ
ಬೆತ್ತಲಾದರು
ಬೇಡವೇ ಹೊಸವರ್ಷ ಬಯ‌ಸುತ್ತಿಲ್ಲ
ನಮ್ಮವರು
ದಂಡ ಪಿಂಡ ರಾಜಕಾರಣಿಗಳಿಂದ
ಮರಳಾದವರು

ಹರಿಕೆ ತೀರಿಸಲು ಬೆತ್ತಲೆಯಾದರು ನಮ್ಮವರು.
ಗೌಡನ ಮುಷ್ಟೆಯ ಪೈಶಾಚಿಕ ಕೃತ್ಯಕೆ ನಲಗಿದರು.
ದುಷ್ಟ ಶಕ್ತಿಗಳ ಕೈಗೊಂಬೆಯಾಗಿ ಕುಣಿದಾಡಿದರು
ಮಾನವಿಯತೆ ಮರೆತ‌‍ ಕಾಮಾಂಧಗೆ ಬಲಿಯಾಗುತ್ತಿದ್ದಾರೆ.

ಹೊಸ ಬೆಳಕ ಕಂಡವರಿಗೆ ಮರಿಚಿಕೆ ಆಗುವುವುದು
ಕೊಲೆ ಸುಲಿಗೆ ಮಾಡಿದವರಿಗೆ ಶಿಕ್ಷೆ
ಆಗದು
ಕಾನೂನು ಕಾಯ್ದೆ ಉಳ್ಳವರ ಪಾಲಾಗಿರುವುದು.
ಕುರುಡು ಕಾಂಚಾಣ ಅಷ್ಟಹಾಸ ಗೈಯುತಿರುವುದು

ಬದಲಾಗಲೇ ಬೇಕು ವಿಶ್ವಪಥ ಅದುವೆ ಮನುಜಪಥ
ಶೋಷಣೆ ರಹಿತ ಸಮಾಜವೇ ನಮ್ಮ
ಸತ್ ಪಥ
ಬದಲಾಯಿಸೇ ಬದಲಾಯಿಸುತ್ತೆವೆ ವಿಶ್ವಮಾನವ ಪಥ
ಸಾಕು ನಿಮ್ಮ ಹುಸಿಯಂಜ ನಾವು ಕಂಡಿದ್ದೇವೆ ಹೊಸ ಪಥ

ರವೀಂದ್ರ ಆರ್ ಪಟ್ಟಣ
ಮುಳಗುಂದ.—ರಾಮದುರ್ಗ

Don`t copy text!