10.50 ಕೋಟಿ ರೂ. ಬಿಡುಗಡೆ
ಮಳೆ ಹಾನಿ : ರೈತರ ಖಾತೆಗೆ ಹಣ ಜಮಾ – ಕವಿತಾ ಆರ್.
e-ಸುದ್ದಿ ಮಸ್ಕಿ
ಮಸ್ಕಿ : ಈಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಬಿದ್ದ ಮನೆಗಳಿಗೆ ಹಾಗೂ ಬೆಳೆ ಹಾನಿ ಪರಿಹಾರವನ್ನು ಶುಕ್ರವಾರ ರೈತರ ಖಾತೆಗಳಿಗೆ ನೇರವಾಗಿ ಆರ್ ಟಿ ಜಿ ಎಸ್ ಮೂಲಕ ಪಾವತಿ ಮಾಡಲಾಯಿತು ಎಂದು ತಹಶೀಲ್ದಾರ್ ಕವಿತಾ ಆರ್. ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ 75 ಮನೆಗಳು ಮಳೆಗೆ ಬಿದ್ದಿದ್ದು ಮನೆ ಕಳೆದುಕೊಂಡ ಕುಟುಂಬಗಳಿಗೆ ₹ 43.81 ಲಕ್ಷ ಪರಿಹಾರವನ್ನು ಮನೆ ಕಳೆದುಕೊಂಡ ಸಂತ್ರಸ್ತರ ಕುಟುಂಬಗಳಿಗೆ ಪಾವತಿ ಮಾಡಲಾಗಿದೆ.
ಮಳೆಯಿಂದಾಗಿ 16672 ರೈತರ ಬೆಳೆ ಹಾಳಾಗಿದ್ದು ಅವರ ಖಾತೆಗೆ ನೇರವಾಗಿ ₹ 10.80 ಕೋಟಿ ಹಣ ಪಾವತಿ ಮಾಡಲಯಿತು ಎಂದರು.
ತಾಲ್ಲೂಕಿನಲ್ಲಿ ಪ್ರಥಮ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ರೈತರ ಖಾತೆಗೆ ನೇರವಾಗಿ ಹಣ ಪಾವತಿ ಮಾಡಲಾಗಿದೆ. ಹಾನಿ ಸಮೀಕ್ಷೆ ಆಧಾರಿಸಿ ಆಯಾ ರೈತರಿಗೆ ಪರಿಹಾರ ವಿತರಿಸಲಾಗಿದೆ ಎಂದರು