ಮದುವೆಗೆ ಬಂದಿದ್ದ ಇಬ್ಬರು ಯುವಕರು ನೀರು ಪಾಲು

ಮಸ್ಕಿ :ತಾಲೂಕಿನ ಶಂಕರನಗರ ಕ್ಯಾಂಪ್ ಹತ್ತಿರ ತುಂಗಭದ್ರಾ ಉಪ ಕಾಲುವೆಯಲ್ಲಿ 62ನೇ ಮೈಲ್ ಹತ್ತಿರ ಈಜಲು ಹೋಗಿದ್ದ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ಗುರುವಾರ ಜರುಗಿದೆ.
ಸಮೀಪದ ಶಂಕರನಗರ ಕ್ಯಾಂಪ್‍ನಲ್ಲಿ ಮದುವೆ ಕಾರ್ಯಕ್ರಮಕ್ಕೆ ದೀಪಾಲಂಕಾರ (ಎಲೆಕ್ಟ್ರೀಕಲ್) ಕೆಲಸ ಮಾಡಲು ಹೈದ್ರಾಬಾದ್‍ನಿಂದ ಬಂದಿದ್ದ ದಯಾ (18), ಶಿವ (19) ವರ್ಷದ ಇಬ್ಬರು ಯುವಕರು ಈಜಾಡಲು 62ನೇ ಉಪ ಕಾಲುವೆ ಹೋಗಿದ್ದರು. ಆದರೆ ಕಾಲುವೆಯಲ್ಲಿ ಮೊದಲು ಒಬ್ಬ ಯುವಕ ನೀರಿನ ಆಳ ಗೊತ್ತಾಗದೆ ಇಳಿದ ನಂತರ ಕಾಲುವೆಯಲ್ಲಿ ಮುಳುಗುತ್ತಿರುವುದನ್ನು ಕಂಡು ಇನ್ನೋಬ್ಬ ಯುವಕ ಆತನ ರಕ್ಷಣೆ ಮಾಡಲು ಕಾಲುವೆಗೆ ಇಳಿದಿದ್ದಾನೆ. ಆದರೆ ಇಬ್ಬರು ಕಾಲುವೆಯಲ್ಲಿ ನೀರಿನಲ್ಲಿ ನಾಪತ್ತೆಯಾಗಿದ್ದು. ಸ್ಥಳಕ್ಕೆ ಕವಿತಾಳ ಠಾಣೆ ಪೊಲೀಸರು ಹಾಗೂ ಅಗ್ನಿ ಶಾಮಕ ಇಲಾಖೆ ಸಿಬ್ಬಂದಿಗಳು ಧಾವಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

Don`t copy text!