ಶಬರಿ
ಅಂದು ಕಾದಿದ್ದಳು
ಶ್ರೀ ರಾಮನ ಬರವಿಗಾಗಿ
ಆ ಶಬರಿ…
ಇಂದು ಕಾಯುತ್ತಿರುವಳು
ಗೆಳೆಯನ ಬರವಿಗಾಗಿ
ಈ ಶಬರಿ…
ಶ್ರೀ ರಾಮ ಬರುವ
ದಾರಿಯ ಕಾದು ಕಾದು
ಸೋತಳು ಆ ಶಬರಿ…
ಇನಿಯ ಬರುವ ದಾರಿಗೆ
ಹೂವ ಹಾಸಿ ಕಾದಿರುವಳು
ಈ ಶಬರಿ…
ಆ ಶಬರಿಯ ಭಕ್ತಿಗೆ
ಮೆಚ್ಚಿ ದರ್ಶನ ಕೊಟ್ಟ
ಶ್ರೀ ರಾಮಚಂದ್ರ…
ಈ ಶಬರಿಯ ನೋಡಲು
ಬಂದೇ ಬರುವನು
ಅವಳ ಬೆಳಗುವ ಚಂದ್ರ….
–ಗೀತಾ.ಜಿ.ಎಸ್
ಹರಮಘಟ್ಟ