ಸಿಂಧುತಾಯಿ
ಸಿಂಧುತಾಯಿ ಸಪಕಾಳ ಅಮರ.
ಸ್ತ್ರೀ ಕುಲಕ್ಕೆ ಮಹಾರಾಷ್ಟ್ರದ ಸಿಂಧೂರ.
ಹುಟ್ಟುತ್ತಲೇ ನೀ ಅನಿಸಿಕೊಂಡೆ
ಚಿಂದಿ.
ಕಷ್ಟಗಳನ್ನೇ ಮಾಡಿಕೊಂಡೆ ನೀ ಸಂಧಿ.
ತವರಿಗೂ ಗಂಡನಿಗೂ ಬೇಡವಾದ ಹೆಣ್ಣು.
ಸಾವಿರಾರು ಅನಾಥ ಮಕ್ಕಳಿಗೆ ಆದಳು ಕಣ್ಣು.
ಸಮಾಜದ ವಂಚಕರಿಗೆ ಹಾಕಿದಳು ಪ್ರಶ್ನೆ.
ಇದರಿಂದ ಇಲ್ಲವಾಯಿತು ಅವಳಿಗೆ ಮನೆ.
ದೇವಸ್ಥಾನ ಬಸ್ಸು ರೈಲು ನಿಲ್ದಾಣಗಳಲ್ಲಿ ಬೇಡಿದಳು ಭಿಕ್ಷೆ.
ಪರೋಪಕಾರಿ ನಿಸರ್ಗ ನೀಡಿತು ಅವಳಿಗೆ ರಕ್ಷೆ.
ನೂರಾರು ಹಾಲುಗಲ್ಲಿನ ಶಿಶುಗಳ ಮಾಯಿ.
ದೀಪಕ್ ಕರುಣಾ ಇವರಿಗಾದೆ ತಾಯಿ.
ಕೂಲಿನಾಲಿ ಮಾಡಿ ಸಲುಹಿದೆ ನಿನ್ನ ಪ್ರೀತಿ ಮಡಿಲಲ್ಲಿ.
ಅವರು ಇಂದು ದೇಶ ಬೆಳಗುತ್ತಿರುವ ನಿನ್ನ ಹೆಸರಿನಲ್ಲಿ.
ಎಂಥ ಅದ್ಭುತ ಜೀವನ ನೋಡು ಒಮ್ಮೆ ಹೊರಳಿ.
ಅಮ್ಮ ಎಂದು ಕರೆಯುತ್ತಿದ್ದೇವೆ ಮತ್ತೆ ಬಾ ನೀ ಮರಳಿ.
–ಸುಜಾತಾ ಪಾಟೀಲ ಸಂಕ( ಜತ್ತ)