ಧೃವ ತಾರೆ
ಇದ್ದದ್ದು ಇದ್ಹಾಂಗ ಹೇಳತೀನಿ ಕೇಳಿರಿ
ದಾನಶೂರನಲ್ಲ ಇಂವಾ ತ್ಯಾಗಶೂರರಿ
ಸಂಸ್ಥಾನಕ ಸಂಸ್ಥಾನ ದಾನ ಮಾಡಿದ
ಲಿಂಗಾಯತ ಸಂಸ್ಥೆಗಾಗಿ ಮಾಡಿ ಮಡಿದ
ಜಗದೇಕೈಕ ತ್ಯಾಗಿಯಾಗಿ ಬಾಳಿದ
ದತ್ತು ಬಂದವ ಸಮಾಜ ದತ್ತು ಪಡೆದ
ಲಕ್ಷಾಂತರ ಬಡವರಿಗೆ ತಂದೆಯಾದ
ಭಾರತದ ಟಾಲ್ಸ್ಟಾಯ್ ಎಲ್ಲವ ತೊರೆದ
ಬೀದಿ ಬೀದಿಗಳಲಿ ದೇಣಿಗೆ ಬೇಡಿದ
ಶಿಕ್ಷಣ ಸಂಸ್ಥೆಗೆ ಹಗಲಿರುಳು ದುಡಿದ
ಅರಟಾಳ ರುದ್ರಗೌಡರ ಉಸಿರಿಗೆ ಉಸಿರಾದ
ಜಗ ಮರೆಯದ್ಹಂಗ ಭವ್ಯ ತೇರು ಕಟ್ಟಿದ
ನನ್ನಪ್ಪ,ಅಪ್ಪ ಬಸವಣ್ಣನಂಗ ಬದುಕಿದ
ಬೇಡುವವರಿಲ್ಲದೆ ಬಡವನಾದೆನೆಂದ
ಬಡವ-ಬಲ್ಲಿದರೆಂಬ ಬಲೆ ಕಿತ್ತೊಗೆದ
ಸಪ್ತರ್ಷಿಗಳಲಿ ಕಿಂಕರನಾಗಿ ಸೇವೆಗೈದ
ಕಾಯವನು ಕರ್ಪುರದ್ಹಂಗ ಬೆಳಗಿದ
ಮಾವಿನ ಮರದ ಮಾತು ಕೇಳಿದ
ನೆಲವಾಳದೆ ಎಲ್ಲರ ಮನವಾಳಿದ
ಉಪ್ಪರಗಿ ಹತ್ತಿ ಡಂಗೂರ ಸಾರಿದ
ನಾನು ನನ್ನದೆಂಬುದಿಲ್ಲ ಇನ್ನ ಮುಂದ
ಕೊಟ್ಟ ಮಾತಿನಂಗ ಬದುಕಿ ಬಾಳಿದ
–ರವೀಂದ್ರ ಆರ್ ಪಟ್ಟಣ
ಎಸ್.ಜೆ.ಜೆ.ಎಂ.ಸಂ.ಪ.ಪೂ.ಕಾಲೇಜ
ಮುಳಗುಂದ.