ನನ್ನ ನಿನ್ನ ಕಂಗಳಿಂದ ಕರಗಿಸಿಬಿಟ್ಟೆ
“ಹೌದು,ಅಕೆಯದೇ ಫೋನ್”ಇರಬಹುದು ಅಂದುಕೊಂಡ..
ಸ್ನಾನ ಮಾಡಿ ತಲೆ ಒರೆಸಿಕೊಳ್ಳುತ್ತಾ ಹೊರಗೆ ಬಂದು ರಿಂಗಾಗುತ್ತಿದ್ದ ಫೋನ್ ರಿಸೀವ್ ಮಾಡಿದ..ಅವನು ಊಹಿಸಿದಂತೆ ಆಕೆಯದೇ ಫೋನ್
” ಗುಡ್ಮಾರ್ನಿಂಗ್ ಮೇಡಂ”ಅಂದು ಮುಗುಳ್ನಕ್ಕ
“ಮೇಡಮ್ಮಾ,ಎಷ್ಟು ಸಾರಿ ಹೇಳಿದ್ದೀನಿ ಹಾಗೆ ಕರೀಬೇಡ ಅಂತ,ನೆನಪೇ ಇಲ್ವಾ”
“ಹೋ,ಸಾರಿ ,ನೆನಪಿದೆ..ಕರೆದು ಅಭ್ಯಾಸ,ಏನ್ ಮಾಡ್ತಿದ್ದೀರಿ”
“ನೀವು ಹೇಳಿ ಮೊದಲು,ಅಲ್ಲಿ ಯಾರಾದರೂ ಇದಾರಾ?”
“I am fine ಇಲ್ಲಿ ಯಾರೂ ಇಲ್ಲ ನಾನೊಬ್ಬನೇ..ಯಾಕೆ?”
“ವಿಡಿಯೋ ಕಾಲ್ ಮಾಡೋಣಾಂತಿದೀನಿ,ನನ್ನ ಬಳೀನೂ ಯಾರೂ ಇಲ್ಲ,ನಿನ್ನ ನೋಡಬೇಕು ಅನಿಸ್ತು”
“ಅದಕ್ಕೇನಂತೆ,ನಾನೇ ಕಾಲ್ ಮಾಡ್ಲಾ”
“ನಿನ್ನ ಕಾಲ್ ಆದ್ರೆ ಇನ್ನೂ ಸ್ವೀಟಾಗಿರುತ್ತದೆ..ಮಾಡು”
ಅವನು ಆಕೆಗೆ ವಿಡಿಯೋ ಕಾಲ್ ಮಾಡಿದ..
“ಇವತ್ತು ತುಂಬಾ ಚನ್ನಾಗಿ ಕಾಣ್ತಿದೀಯ,ಸೂಪರ್”
“ನೀವು ಸಹ ಸೂಪರ್ ಇದೀರಾ”
“ಶ್,ನೋ ನೀವು ಓನ್ಲಿ ನೀನು..ಬಹುವಚನ ನನಗೆ ಬೇಡ”
“ಸರಿ,ನೀನು ತುಂಬಾ ಚನ್ನಾಗಿ ಇದೀಯ”
“That’s good,good boy”
ಅವಳು ಮಾದಕ ದೃಷ್ಟಿಯಿಂದ ಅವನನ್ನು ಎವೆಯಿಕ್ಕದೇ ನೋಡಿ
“ಬೈ ಬೈ ಸೀಯೂ” ಅಂದಳು
ಇವನೂ ಆಕೆಗೆ ಬೈ ಹೇಳಿದ..
ಅವಳಿಗೂ ಇವನಿಗೂ ಆಕಸ್ಮಿಕವಾಗಿ ಬೆಳೆದ ಮನಗಳ ಬೆಸುಗೆ..ಯಾವುದೋ ಸಂದರ್ಭದಲ್ಲಿ ಆಕಸ್ಮಿಕ ಪರಿಚಯ ಆದವರು..
ಆಶ್ಚರ್ಯ ಅಂದರೆ ಆಕೆ ಓರ್ವ ಹರೆಯದ ಸನ್ಯಾಸಿನಿ.ಅದ್ಯಾವುದೋ ಆಶ್ರಮದಲ್ಲಿ ತನ್ನಂತೆ ಇರುವ ಹಲವಾರು ಸನ್ಯಾಸಿನಿಯರ ಜೊತೆ ಈಕೆಯೂ ಇದ್ದಳು..ಆಧ್ಯಾತ್ಮಿಕ ಸಾಧಕಿ..
ಅದೇನೋ ಸೆಳೆತ ಆಕೆಗೆ ಅವನಲ್ಲಿ
“ನನ್ನ ನಿನ್ನ ಕಂಗಳಿಂದ ಕರಗಿಸಿಬಿಟ್ಟೆ” ಎಂದು ಸಾಕಷ್ಟು ಬಾರಿ ಅವನಿಗೆ ದೂರವಾಣಿಯಲ್ಲಿ ಹೇಳಿದ್ದಳು..
ಒಮ್ಮೆ ಅವನಿಗೆ ಹೀಗೆ ಸಂದೇಶ ಕಳುಹಿಸಿದಳು”ನನಗೆ ಎಂದೂ ಹೀಗಾಗಿರಲಿಲ್ಲ,ಬಯಕೆಗಳೇ ಇರಲಿಲ್ಲ.ಈಗ ಅವೆಲ್ಲ ಪುಟಿದೇಳುತ್ತಿವೆ,ಅದಕ್ಕೆ ಕಾರಣ ನೀನೇ,ಯಾಕೆ ಹೀಗೆ?”ಅವನನ್ನೇ ಆಕೆ ಕೇಳಿದ್ದಳು..ಹೀಗೇ ಆಗಾಗ ಕದ್ದುಮುಚ್ಚಿ ಮಾತನಾಡುತ್ತಲೇ ಇರುತ್ತಿದ್ದರು..
ಆತ ಆಕೆಯ ಮಾದಕತೆಯ ನೆನೆದು ಆಕಾಶದಲ್ಲಿ ತೇಲಿ ಹೋದ..
ಒಮ್ಮೆ ಆಕೆ ಇದ್ದಕ್ಕಿದ್ದಂತೆ ಇವನನ್ನು ಭೇಟಿಯಾಗಲು ಬಂದಳು.ಇವನಿಗೆ ನಮಸ್ಕಾರ ಹೇಳಿ ಕಣ್ಣಲ್ಲಿ ಕಣ್ಣಿಟ್ಟು ನೋಡಿ”ಹೇಗಿದೀಯಾ “ಅಂದಳು
*ನಾನು ಸೂಪರ್,ನೀನು?”
“ಹಾಗೇ ಇದೀನಿ”
“ಯಾಕೆ ಬೇಜಾರು”
“ಹಾಗೇನಿಲ್ಲ..ನಿನಗೆ ಒಂದು ವಿಷಯ ಹೇಳಬೇಕು..ಅದ್ರಿಂದ ನಿನಗೆ ಬೇಸರ ಆಗಬಹುದು”
“ಏನದು?”
“ನಾನು ಸಿಫ್ಟ್ ಆಗಬೇಕಂತೆ ಬೆಂಗಳೂರಿಗೆ,ನಿನ್ ಬಿಟ್ ಹೋಗೋಕೆ ಮನಸ್ಸು ಗೋಳಿಡ್ತಿದೆ”
Oh god!!! ಎಂದ ಅವನು ಒಂದು ಕ್ಷಣ ಸುಮ್ಮನೇ ನಿಂತ
“ನಾನು ಹೋಗ್ಲೇ ಬೇಕು,ಇಲ್ಲ ಅನ್ನುವ ಹಾಗಿಲ್ಲ.ನನ್ ಅಪ್ಪ ಅಮ್ಮನ್ನ ಸಾಕಬೇಕು,ಜೊತೆ
ಜೊತೆಗೆ ಬಯಕೆಗಳ ನೋವನ್ನು ಅಗಲಿಕೆಯ ನೋವನ್ನು ಅನುಭವಿಸಬೇಕು”
“ನಿಮಗೆ ಬಯಕೆಗಳು ಇರಬಾರದು ಅಲ್ವಾ”ಅವನು ತಮಾಷೆ ಮಾಡಿದ
“ಯಾರು ಹಾಗೆ ಹೇಳಿದ್ದು,ನಾನು ನಿನ್ನ ಹಾಗೆ ಉಸಿರಾಡಲ್ವಾ,ಊಟ ನಿದ್ರೆ ಮಾಡಲ್ವಾ”
“ಹೌದು,ಪ್ರಕೃತಿ ಸಹಜವಾದವುಗಳು ದೇಹವನ್ನು ಬಿಡದೇ ಬಾಧಿಸುತ್ತವೆ”
“ಮುಚ್ಚಿಡೋಕೆ ಆಗಲ್ಲ..ಮುಚ್ವಿಟ್ಟಷ್ಟು ಪುಟಿದೇಳುತ್ತವೆ,ನೋಡು ಯಶ್ವಂತ್ ಒಂದ್ ಮಾತು ಹೇಳ್ಳಾ,ಹೇಳಲೇಬೇಕು ಅನಿಸ್ತಿದೆ ನಿನ್ನ ಒಮ್ಮೆ ಬಿಗಿಯಾಗಿ ತಬ್ಕೋಬೇಕು ಅನಿಸ್ತಿದೆ..ನಾನು ಸನ್ಯಾಸಿ ಆಗದೇ ಇದ್ದಿದ್ದರೆ ನಿನ್ ಬಿಡ್ತಾ ಇರ್ಲಿಲ್ಲ ಗೊತ್ತಾ,ನೋಡು ಇದನ್ನೆಲ್ಲಾ ಪ್ರಚಾರ ಮಾಡಬೇಡ ,ನೀನು ಮರ್ತುಬಿಡು,ನಾನೂ ಮರ್ತ್ ಬಿಡ್ತೀನಿ”
“ರೋಮಾಂಚನವಾಯ್ತು ಎಂಥಾ ಮಾತು ಹೇಳಿಬಿಟ್ಟೆ ನೀನು..ಎಷ್ಟೊಂದು ಬಯಕೆಗಳಿವೆ,ಅದರೂ ಅವನ್ನೆಲ್ಲಾ ಹತ್ತಿಕ್ಕಿ ಕಾಣದ ದೇವರ ಬಗ್ಗೆ ಮಾತಾಡೋದು ತೀರಾ ಅಸಹಜ ಅಲ್ವಾ..ನಿಮ್ಮ ಜೀವನ ಹೀಗೆ ಮುಗಿದು ಹೋಗಬೇಕಾ,oh god..ಒಡಲ ತುಂಬಾ ಬೆಂಕಿ..ಬಾಯಲ್ಲಿ ಭಗವಂತ ಇದು ಯಾವ ನ್ಯಾಯ”
“ಆತುರದ ,ಅನಿವಾರ್ಯ ಆಯ್ಕೆ ಈ ಸನ್ಯಾಸ.ನಾನು ಬದುಕಲಲ್ಲ ಇತರರಿಗಾಗಿ,ಅವಲಂಬಿತರಿಗಾಗಿ ಬದುಕುತ್ತಿದ್ದೇನೆ
“ಇರುವುದೊಂದೇ ಜನ್ಮ ಅಲ್ಬಾ”
“ಹೌದು,ಈ ಮಾರ್ಗದಲ್ಲಿ ಹೋದರೆ ಮುಕ್ತಿಯಂತೆ,ಜನ್ಮ ಇಲ್ಲವಂತೆ”
“ಎಲ್ಲಾ ಹುಚ್ಚು,ಭ್ರಮೆ,ಬಯಕೆಗಳ ಹತ್ತಿಕ್ಕಿ ಬದುಕುವುದು ಯಾವ ನ್ಯಾಯ”
“ಮನಸ್ಸು ಹತ್ತಿಕ್ಕಿದಷ್ಡು ಪ್ರಜ್ವಲವಾಗಿ ದಹಿಸುತ್ತಿದೆಯಲ್ಲ,ಅನಿವಾರ್ಯ ಸಹಿಸಿಕೊಳ್ಳುವಿಕೆ,ಮೋಕ್ಷ ಮುಕ್ತಿ ಬಯಸುವುದು ಸಹ ಬಯಕೆಯೇ ಅಲ್ಲವೇ ಯಶ್ವಂತ್”
“ಅದೂ ಸಹ ಬಯಕೆಯೇ,ಇದೂ ಸಹ ಬಯಕೆಯೇ?,ಬಯಕೆಗಳಿಲ್ಲದ ಬದುಕೆಲ್ಲಿದೆ”
“ಹೌದು,ಇಲ್ಲಿ ಯಾರೂ ಇಲ್ಲ,ಒಮ್ಮೆ ನನ್ನನ್ನು ಬಿಗಿದಪ್ಪಿಬಿಡು.ಗಂಡಿನ ಸಾಮೀಪ್ಯ ಹೆಣ್ಣಿಗೆ ಬೇಕೇಬೇಕು..ಕೊನೆಯಪಕ್ಷ ಬಿಗಿಯಾದ ಬಿಸಿಯಪ್ಪುಗೆಯ ಅನುಭವವಾದರೂ ಆಗಲಿ..ಇದು ನನ್ನ ಬಯಕೆ.ಈ ಜನ್ಮಕ್ಕೆ ಇಷ್ಟು ಸಾಕು” ಅವಳ ಕಂಗಳು ನೀರಾಡಿದವು
ಅವನು ಅವಳನ್ನು ಬಿಗಿಯಾಗಿ ತಬ್ಬಿಕೊಂಡ.ಅವಳು ತನ್ನ ತೋಳುಗಳ ಹಿಡಿತವನ್ನು ಇನ್ನಷ್ಟು ಬಿಗಿ ಮಾಡಿದಳು..
ಹಾಗೇ ಒಂದು ನಿಮಿಷ ಮೈಮರೆತಳು..ಅವನಿಗೂ ಅವಳ ಅಪ್ಪುಗೆ ಸಾಮೀಪ್ಯ ಹಿತವೆನಿಸಿತು..
ಅವನ ಹಣೆಗೆ ಮುತ್ತಿಕ್ಕಿ ಹಿಂದಿರುಗಿ ನೋಡದೆ ಅವಳು ಹೊರಟುಬಿಟ್ಟಳು
ಅವನು ಆಕೆಗೆ ಕಾಲ್ ಮಾಡಿದ..not reachable ಆಗಿತ್ತು..
ಮತ್ತೆಂದಿಗೂ ಅವನಿಗೂ ಅವನ ಕಾಲ್ ಗೂ ಆಕೆ ಸಿಗಲೇ ಇಲ್ಲ..
-ಮಹಿಮ