ಕೊರೆಯುವ ಚಳಿಯಲ್ಲಿ ದೇಶ ಕಾಯುತ್ತಿರುವ ಮಸ್ಕಿ ಯೋಧ
e-ಸುದ್ದಿ ಮಸ್ಕಿ
ಪಟ್ಟಣದ ಯುವಕ ಮನೋಜ್ ಕುಮಾರ ಕಳೆದ ೧೦ ವರ್ಷಗಳಿಂದ ದೇಶ ಕಾಯುವ ಕಾಯಕದಲ್ಲಿ ನಿರತನಾಗಿದ್ದಾನೆ. ಶ್ರೀನಗರದಲ್ಲಿ ಸದ್ಯ ಕರ್ತವ್ಯ ನಿರ್ವಹಿಸುತ್ತಿದ್ದು ಮೈನಸ್ ೫ ಡಿಗ್ರಿ ಸೆಲ್ಸಿಯಸ್ ಕೊರೆಯುವ ಚಳಿಯಲ್ಲಿ ಹಗಲು ರಾತ್ರಿ ಎನ್ನದೆ ತಮ್ಮ ಜೀವದ ಹಂಗು ತೊರೆದು ದೇಶ ಕಾಯುತ್ತಿದ್ದಾನೆ.
ಭಾನುವಾರ ಬೆಳಿಗ್ಗೆ ಶ್ರೀನಗರ ಸಮೀಪದ ಹಿಮಪರ್ವತದಲ್ಲಿ ಹುಟ್ಟೂರಿನ ಅಭಿಮಾನದಿಂದ ಹಿಮಗಡ್ಡೆಯ ಮೇಲೆ ‘ಮಸ್ಕಿ’ ಹೆಸರು ಬರೆದು ಅದರ ಮುಂದೆ ಸಶಸ್ತçದೊಂದಿಗೆ ಕರ್ತವ್ಯ ನಿರತನಾಗಿದ್ದಾನೆ.
ಮನೋಜ ಕುಮಾರ ಮಸ್ಕಿಯ ಜೋಗಿನ್ ರಾಮಣ್ಣ ಸ್ಮಾರಕ ಪ್ರೌಡ ಶಾಲೆಯ ವಿದ್ಯಾರ್ಥಿಯಾಗಿದ್ದು ಶಾಲ ದಿನಗಳಲ್ಲಿ ದೇಶಾಭಿಮಾನ ಹೊಂದಿದ್ದ, ದೇಶ ಸೇವೆ ಮಾಡಲು ಸೈನ್ಯಕ್ಕೆ ಸೇರುವುದಾಗಿ ಶಾಲ ವಾರ್ಷಿಕೋತ್ಸವದಲ್ಲಿ ತನ್ನ ಭಾವನೆ ಹಂಚಿಕೊಂಡಿದ್ದ ಎಂದು ಅವನ ಸ್ನೇಹಿತರು ನೆನಪಿಸಿಕೊಂಡಿದ್ದಾರೆ.