🚩 ವೀರ ಸನ್ಯಾಸಿ 🚩
ಓ ವೀರ ಸನ್ಯಾಸಿ
ನಿಂದೆ ನೀ ಇಲ್ಲಿ
ಚೈತನ್ಯ ಉಕ್ಕಿಸಿ,
ಸನಾತನ ಧರ್ಮ ರಕ್ಷಿಸಿ…
ದೇಶಪ್ರೇಮದ ಪಾಠವನು
ಯುವಕರಲಿ ಬಿಂಬಿಸುತ
ಸುತ್ತಿದೆ ನೀ ಜಗವನು
ಎಲ್ಲರನು ಎಚ್ಚರಿಸುತ…
‘ ಏಳಿ, ಎದ್ದೇಳಿ-‘ ಎಂಬ ಮಂತ್ರ
ಅದು ಗುರಿ ಮುಟ್ಟುವ ತಂತ್ರ ;
ತುಂಬಿದೆ ಜನಮಾನಸದಿ
ಬ್ರಹ್ಮಚರ್ಯ ವ್ರತ ಪಾಲಿಸುತ.
ಭರತಖಂಡದ ಕಣ್ಮಣಿ
ವಿಶ್ವಕ್ಕೆ ವಿವೇಕದ ಗಣಿ
ಭಾರತಾಂಬೆಯ ಮುಕುಟಮಣಿ
ಯುವಶಕ್ತಿಗೆ ಪರುಷಮಣಿ..
ಅಚಲ ಬಂಡೆಯ ಮೇಲೆ,
ಚಂಚಲ ಜಲದ ನಡುವೆ
ನಿಂದಿಹೆ ನೀ ಅಚಲನಾಗಿ
ಭಾರತಿಯ ಚರಣಗಳ
ಕಮಲದಳಗಳಲಿ,
ದೃಢ ಹೆಜ್ಜೆಗಳನು ಊರಿ..!.
ಓ,ವೀರ ಸನ್ಯಾಸಿ..
ಬಾಗಿದೆ ನಾ ನಿನಗೆ ನಮಿಸಿ…..
–ಹಮೀದಾ 🙏🙏