ಆರೋಗ್ಯ ಶಿಕ್ಷಣ ಆಧ್ಯಾತ್ಮಿಕತೆ ನಿಮ್ಮ ಜೀವನ ಬದಲಿಸಬಲ್ಲವು – ಡಾ ಮಿಸಾಳೆ.…
e-ಸುದ್ದಿ ಬೆಳಗಾವಿ
ಮರಾಠ ಮಂಡಳ ಕಲಾ ವಾಣಿಜ್ಯ ವಿಜ್ಞಾನ ಮತ್ತು ಗ್ರಹ ವಿಜ್ಞಾನ ಪದವಿ ಮಹಾವಿದ್ಯಾಲಯ
ಬೆಳಗಾವಿ ಇಂದು ರೆಡ್ ಕ್ರಾಸ್ ವತಿಯಿಂದ ಸ್ವಾಮಿ ವಿವೇಕಾನಂದ ಅವರ 159 ನೇ ಜನ್ಮಜಯಂತಿ ಮತ್ತು ರಾಷ್ಟ್ರೀಯ ಯುವ ಸಪ್ತಾಹ ದಿನಾಚರಣೆ
ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ಮುಖ್ಯ ಅತಿಥಿಗಳಾಗಿ ಆಗಮಿಸಿದ ಜ್ಯೋತಿ ಕಾಲೇಜಿನ ಪ್ರಾಧ್ಯಾಪಕರು ಡಾ ಡಿ ಎಂ ಮಿಸಾಳೆ
ಸ್ವಾಮಿ ವಿವೇಕಾನಂದ ಅವರ ಬದುಕು ಬರಹ ಆಲೋಚನೆಗಳು ಮತ್ತು ಕೃತಿಗಳ ಕುರಿತಾಗಿ ಮಾತನಾಡುತ್ತಾ
“ಯುವಕರು ಜೀವನದಲ್ಲಿ ಯಾವುದೇ ಕಾರ್ಯ ಮಾಡಿದರೂ ಅದಕ್ಕೆ ಹಿನ್ನೆಲೆಯಾಗಿ ಆಧ್ಯಾತ್ಮಿಕತೆ ಇರಬೇಕು.ಸ್ವಾತಂತ್ರ್ಯ ಸಂಗ್ರಾಮದಲ್ಲಿಯು ಆಧ್ಯಾತ್ಮಿಕ ಮಾರ್ಗ ಅನುಸರಿಸಿದ ನಮ್ಮ ಹಿರಿಯರು ಶಾಂತಿಯುತವಾಗಿ ಸ್ವತಂತ್ರ ಪಡೆದರು.
ಜೀವನದೆಡೆಗಿನ ನಮ್ಮ ದೃಷ್ಟಿಕೋನ ತುಂಬಾ ಮಹತ್ವದ್ದು
ಎಲ್ಲವೂ ನಮ್ಮ ಮನಸ್ಸಿನಲ್ಲಿದೆ ಒಳ್ಳೆಯದು-ಕೆಟ್ಟದ್ದು ನಾವು ಗ್ರಹಿಸುವ ಶಕ್ತಿ ಯಲ್ಲಿದೆ ಸಕಾರಾತ್ಮಕ ಧೋರಣೆಯನ್ನು ಜೀವನದಲ್ಲಿ ಅನುಸರಿಸಿ ಆರೋಗ್ಯ ಶಿಕ್ಷಣ ಆಧ್ಯಾತ್ಮಿಕತೆ ಜೀವನದಲ್ಲಿ ಅಳವಡಿಸಿಕೊಂಡು ದೇಶಕ್ಕೆ ಸಮಾಜಕ್ಕೆ ಒಳಿತನ್ನು ಮಾಡಿ” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಗಜಾನನ್ ಬೆನ್ನಳಕರ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕೇವಲ ಪೂಜೆ-ಪುನಸ್ಕಾರ ಭಜನೆ ಮಾಡುತ್ತ ಕುಳಿತರೆ ಆಗುವುದಿಲ್ಲ ಅದರ ಜೊತೆಜೊತೆಗೆ ಕಠಿಣ ಪರಿಶ್ರಮ ಸತತ ಅಧ್ಯಯನ ಸತತ ಪರಿಶ್ರಮ ಮೈಗೂಡಿಸಿಕೊಂಡು ವಿದ್ಯಾರ್ಥಿಗಳು ಯಶಸ್ಸಿನೆಡೆಗೆ ಸಾಗಬೇಕು ಎಂದು ಕರೆ ನೀಡಿದರು.
ರೆಡ್ ಕ್ರಾಸ್ ಕ್ಲಬ್ಬಿನ ಪ್ರೋಗ್ರಾಮ್ ಆಫೀಸರ್ ಪ್ರೊ ಗಿರೀಶ್ ಕರ್ಕಿ ಕಾರ್ಯಕ್ರಮವನ್ನು ಆಯೋಜಿಸಿ ವೇದಿಕೆಯನ್ನು ಸ್ವಾಗತಿಸಿ ಅತಿಥಿಗಳ ಪರಿಚಯ ಮಾಡಿಕೊಟ್ಟರು.
ಮಹಾವಿದ್ಯಾಲಯದ ನ್ಯಾಕ್ ಕೊಆರ್ಡಿನೇಟರ್
ಪ್ರೊ ವಿಜಯಲಕ್ಷ್ಮಿ ತಿರ್ಲಾಪುರ ಕಾರ್ಯಕ್ರಮ ನಿರೂಪಿಸಿ ಪ್ರಾರ್ಥಿಸಿದರು
ಡಾ ವೆಂಕಟೇಶಪ್ಪ ವಂದನಾರ್ಪಣೆ ಸಲ್ಲಿಸಿದರು.ಕಾಲೇಜಿನ ಸಿಬ್ಬಂದಿಗಳಾದ, ಪ್ರೊ ತೇಲಿ , ಡಾ ಮೊಳೆರಾಕಿ ,ರಾಜು ಹಟ್ಟಿ ,ಮನೀಶ ಮೋಹಿನಿ ಸೋನಾಲಿ ಭಾಗ್ಯಶ್ರೀ ಆರತಿ ಜಾದವ್ ಉಪಸ್ಥಿತರಿದ್ದರು