ಗಜಲ್

ಗಜಲ್

ಅದೆಷ್ಟು ನಡೆದಿಹ ಕಾಲು ಸೋತದ್ದು ಹೇಗೆ
ಪ್ರತಿಹೆಜ್ಜೆ ತನ್ನ ಗುರುತು ಮರೆತದ್ದು ಹೇಗೆ

ಕಲ್ಲು ಮುಳ್ಳಿನ ಹಾದಿ ಹೂವು ಹಾಸಿನದಲ್ಲ
ಪಯಣದಲ್ಲಲ್ಲಿ ಸವಿ ಜೇನ ಸವಿದದ್ದು ಹೇಗೆ

ಜೀವನ ರಥಬೀದಿ ಏಳುಬೀಳಿನ ದಿಬ್ಬದಂತೆ
ನೆನಪುಗಳ ಚಕ್ರದಡಿ ಸಿಕ್ಕಿ ಬದುಕಿದ್ದು ಹೇಗೆ

ಕೊಡವಿದ ಜ್ವಾಲೆಯಂತೆ ಮುದದ ತಂಗಾಳಿ
ವೈಶಾಖದ ಉರಿಯೂ ಶಿಶಿರ ಆದದ್ದು ಹೇಗೆ

ಮುಗಿದ ಭಾವದಲೆ ಮುಗಿಯದ ಯಾನ ‘ಗಿರಿ’
ಆಸೆಗಳ ಕೊರಡು ಮತ್ತೆಂತು ಕೊನರಿದ್ದು ಹೇಗೆ

ಮಂಡಲಗಿರಿ ಪ್ರಸನ್ನ

Don`t copy text!