ಶರಣರು ಮತ್ತು ಸಂಕ್ರಮಣ ಕಾಲ
–
ಕನ್ನಡ ನೆಲಕ್ಕೆ ಶರಣ ಸಂಸ್ಕೃತಿ ಒಂದು ಬಹು ದೊಡ್ಡ ಕೊಡುಗೆಯಾಗಿದೆ. ಇಂತಹ ಬಹುದೊಡ್ಡ ಮೌಲಿಕ ಸಾಹಿತ್ಯಕ್ಕೆ ಆಪತ್ತು ಬಂದಾಗ ಶರಣರು ತಮ್ಮ ಜೀವದ ಹಂಗು ತೊರೆದು ಹೋರಾಡಿ ವೀರ ಮರಣ ಅಪ್ಪಿದರು. “ಮರಣವೇ ಮಹಾನವಮಿ “ಎಂದು ನಂಬಿದ ಶರಣರು ವಚನಗಳನ್ನು ಉಳಿಸುವಲ್ಲಿ ಹರಸಾಹಸ ಮಾಡಿ ಮುಂದಿನ ಪೀಳಿಗೆಗೆ ಬಳುವಳಿಯಾಗಿ ಕೊಟ್ಟು ಬಯಲಾದರು. ಬಸವಾದಿ ಶರಣರ ವಚನಗಳ ಅಧ್ಯಯನ ಸಂಶೋಧನೆ ಒಂದು ಜನ್ಮದಲ್ಲಿ ಮಾಡಿ ಮುಗಿಸಲು ಆಗುವದಿಲ್ಲ.
ಬಸವಣ್ಣನವರ ಸಂಘರ್ಷ ಸಮರಸ ಸಮನ್ವಯತೆ ಜಗ್ಗಟಿಗೆ ಒಂದು ಅತ್ಯಂತ ವಿನೂತನ ಸಮತೆಯ ಸಿದ್ಧಾಂತ ಕೊಟ್ಟಿದ್ದಾರೆ. ಅದನ್ನು ಬಸವ ತತ್ವಗಳ ನಿಲುವಿನ ಆಶಯ ಆಚರಣೆಗಳಲ್ಲಿ ನಮಗೆ ಆಚರಿಸಲು ನಮ್ಮವರೇ ಅಡ್ಡಿಯಾಗಿದ್ದಾರೆ. ವ್ಯಕ್ತಿ ಕೇಂದ್ರಿತ ಧರ್ಮವನ್ನು ಸಾಂಸ್ಥಿಕರಣಗೊಳಿಸಿ ಸುಂದರ ಸಂದೇಶಗಳನ್ನು ವಿರೂಪಗೊಳಿಸಿದ್ದೇವೆ ನಾವೆಲ್ಲಾ.
. ಪಶ್ಚಿಮ ದಿಕ್ಕು ತೋರಿಸಿ ಸೂರ್ಯ ಹುಟ್ಟುತ್ತಾನೆಂದು ನಮ್ಮನ್ನು ನಂಬಿಸಿ ಮೋಸ ಮಾಡಿದ ನಮ್ಮ ಧಾರ್ಮಿಕ ಮುಖಂಡರು .
ಬಸವ ಧರ್ಮಕ್ಕೂ ತಮಗೂ ಯಾವುದೇ ಸಂಬಂಧವಿಲ್ಲೆಂದು ಕಣ್ಣಮುಚ್ಚಿ ಕುಳಿತ ರಾಜಕೀಯ ನಾಯಕರು. ಬಸವ ತತ್ವದ ಸತ್ಯ ಗೊತ್ತಿದ್ದರೂ ತಪ್ಪು ಮಾರ್ಗದರ್ಶನ ಮಾಡಿ ವ್ಯಕ್ತಿ ಪ್ರತಿಷ್ಠೆ ಬೆಳೆಸಿಕೊಳ್ಳುತ್ತಿರುವ ಸ್ವಾಮಿಗಳು ಮಾತೆಯರು ಅಕ್ಕನವರು ಅಣ್ಣನವರು.
ಬಸವಣ್ಣನವರನ್ನು ಅರಿಯಲೊಲ್ಲದೆ ಮರೆತ ನಮ್ಮ ಬಸವ ಭಕ್ತರು. ಶ್ರೀಮಂತರಿಗೆ ಬೇಕಿಲ್ಲ ಶರಣ ತತ್ವ ಸಂದೇಶಗಳು , ಬಡವರಿಗೆ ಅರ್ಥವಾಗುವದಿಲ್ಲ .
ಮಧ್ಯಮ ವರ್ಗದವರಿಗೆ ಅರ್ಥವಾಗುತ್ತದೆ ಆದರೆ ಅದನ್ನು ಗಟ್ಟಿಯಾಗಿ ಅನೇಕ ಪ್ರತಿರೋಧಗಳ ಮಧ್ಯೆ ಅನುಷ್ಠಾನಗೊಳಿಸುವ ಶಕ್ತಿಯಿಲ್ಲ.
ಶತಮಾನದ ದಾಸ್ಯತ್ವದಿಂದ ನಾವು ಹೊರ ಬರಲಾರೆವು. ಆತಂಕ ಅಸಹಾಯಕತೆ ಆತ್ಮ ದ್ರೋಹದಿಂದ ಬದುಕುತ್ತಿದ್ದೇವೆ.
ಆದರೆ ಸೂರ್ಯನನ್ನ ಸುತ್ತುತ್ತಿರುವ ಭೂಮಿ ಉತ್ತರಾಯಣದಲ್ಲಿ ತನ್ನ ಪಥವನ್ನು ಬದಲಿ ಮಾಡಿಕೊಂಡು ಸೂರ್ಯನನ್ನು ಸುತ್ತುತ್ತದೆ. ನಾವು ಬದಲಾಗಲಿಲ್ಲ ,ಬದಲಾಗುವದಿಲ್ಲ ನಾವು ವ್ಯಕ್ತಿ ನಿಷ್ಠೆಗೆ ಜೋತು ಬಿದ್ದಿದ್ದೇವೆ. ಒಮ್ಮೆ ಯೋಚಿಸಿ ಶರಣರ ನಿಸ್ವಾರ್ಥ ತ್ಯಾಗ ಬಲಿದಾನವನ್ನು . ನಿಮ್ಮ ಶಕ್ತಿಗನುಗುಣವಾಗಿ ಬದಲಾವಣೆಗೆ ಕೈ ಜೋಡಿಸಿ ಕಳೆದು ಹೋದ ಕಲ್ಯಾಣವನ್ನು ಮತ್ತೆ ಹುಡುಕೋಣ ಕಟ್ಟೋಣ. ಎಲ್ಲರಿಗು ಶರಣಾರ್ಥಿಗಳು .
–
-ಡಾ.ಶಶಿಕಾಂತ.ಪಟ್ಟಣ -ಪುಣೆ ರಾಮದುರ್ಗ.
ಕಾರ್ಯಾಧ್ಯಕ್ಷರು ವಿಶ್ವ ಲಿಂಗಾಯತ ಸಮಿತಿ (ರಿಜಿ)*