ಕಲ್ಯಾಣ ಕರ್ನಾಟಕದ ಸಂಸ್ಕೃತಿ ಕೃತಿಗೆ ಪ್ರಶಸ್ತಿ

ಕಲ್ಯಾಣ ಕರ್ನಾಟಕದ ಸಂಸ್ಕೃತಿ ಕೃತಿಗೆ ಪ್ರಶಸ್ತಿ

ಡಾ.ಚನ್ನಬಸವಯ್ಯ ಹಿರೇಮಠ ಅವರ ಕಲ್ಯಾಣ ಕರ್ನಾಟಕದ ಸಂಸ್ಕೃತಿ ಕೃತಿಗೆ ಗುಲ್ಬರ್ಗ ವಿಶ್ವವಿದ್ಯಾಲಯ ೨೦೨೦ ರ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಡಮಾಡಿದ್ದು ಆ ಹಿನ್ನೆಲೆಯಲ್ಲಿ ಈ ಕೃತಿ ಕುರಿತು ಸಂಕ್ಷಿಪ್ತ ಪರಿಚಯ
ಶ್ರೀ ಚನ್ನಬಸವೇಶ್ವರ ಸಂಸ್ಥಾನ ಸುಕ್ಷೇತ್ರ ಹಾರಕೋಡು(ಬೀದರ ಜಿಲ್ಲೆ) ಈ ಕೃತಿಯನ್ನು ಪ್ರಕಟಿಸಿದ್ದಾರೆ.


ಲೇಖಕರೇ ಹೇಳಿರುವಂತೆ ಈ ಕೃತಿಯಲ್ಲಿ “ಕಲ್ಯಾಣ ಕರ್ನಾಟಕದ ಸಂಸ್ಕೃತಿಯನ್ನ ಶಾಸನಗಳ ನೆಲೆಯಲ್ಲಿ” ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ. ಕಲ್ಯಾಣ ಕರ್ನಾಟಕದ ಕಲೆ,ಸಾಹಿತ್ಯ, ಧರ್ಮ, ಸಮಾಜ ಮುಂತಾದವುಗಳ ಚಿತ್ರಣವನ್ನು ಶಾಸನಗಳ ಆಧಾರಗಳಿಂದ ಇಲ್ಲಿ ಸಾದರ ಪಡಿಸಲಾಗದೆ. ಬೌದ್ಧ, ಜೈನ,ವೈಷ್ಣವ, ವೀರಶೈವ ಲಿಂಗಾಯತ, ಸೂಫಿ ಶರಣರ ಚಿಂತನೆಗಳು ಕಲ್ಯಾಣ ಕರ್ನಾಟಕದ ಶಾಸನಗಳಲ್ಲಿ ಯಥೇಚ್ಛವಾಗಿದ್ದು ಅವುಗಳನ್ನು ಮತ್ತೊಮ್ಮೆ ಸಮಾಜದ ಮುಂದೆ ಅನಾವರಣಗೊಳಿಸಿ ಅಂಧಶ್ರದ್ದೆ ಮೂಢನಂಬಿಕೆಗಳನ್ನು ಹೊಡೆದೋಡಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.”ಶಾಸನ ಪರಿಣಿತರಾದ ಡಾ.ಚನ್ನಬಸವಯ್ಯ ಹಿರೇಮಠ ಅವರು ನಿರಂತರ ಅಧಯಯನದಿಂದ ಯಾವ ಸದ್ದು ಗದ್ದಲ ಇಲ್ಲದೇ ಉನ್ನತಮಟ್ಟದ ಕೃತಿಗಳನ್ನು ರಚಿಸುತ್ತಾ ಬಂದಿದ್ದಾರೆ ಶಾಸ್ತ್ರ ಸಾಹಿತ್ಯ ಬರಹಗಾರರಲ್ಲಿ ಡಾ.ಚನ್ನಬಸವಯ್ಯ ಅವರು ಶ್ರೇಷ್ಠರು” ಎಂದು ಹೇಳುವ ಡಾ.ಸಂಗಮೇಶ ಸವದತ್ತಿಮಠ ಅವರು ಮುಂದುವರೆದು ” ಕಲ್ಯಾಣ ಕರ್ನಾಟಕದ ಇಡೀ ಸಾಂಸ್ಕೃತಿಕ ಇತಿಹಾಸವನ್ನೇ ಅನಾವರಣ ಮಾಡಿ ಐರಾವತವನ್ನು ಅಂಗೈಯಲ್ಲಿ ಹಿಡಿದು ತೋರಿಸಿದಂತೆ ಅಚ್ಚರಿಗೊಳಿಸಿದ್ದಾರೆ” ಎಂದು ಉದ್ಘರಿಸಿರುವುದು ಈ ಕೃತಿಯ ಮಹತ್ವವನ್ನು ಸಾರಿ ಸಾರಿ ಹೇಳುತ್ತದೆ. ಶಾಸನಗಳ ಆಧಾರದಲ್ಲಿ ಡಾ.ಚನ್ನಬಸವಯ್ಯ ಅವರು ಕೆಲವು ಸತ್ಯಗಳನ್ನು ಇಲ್ಲಿ ಬಹಿರಂಗ ಪಡಿಸಿದ್ದು ಅವು ಈಗಾಗಲೇ ನಂಬಿರಿವ ಸತ್ಯಗಳನ್ನು ಪ್ರಶ್ನಿಸುತ್ತಿವೆ
ಉದಾಹರಣೆಗೆ ಕಲ್ಯಾಣ ಕ್ರಾಂತಿ ಘಟನೆ ನಡೆದಿದ್ದು ೧೧೬೮ ಅಲ್ಲ ೧೧೮೫ ರಲ್ಲಿ ಎಂಬುದಾಗಲಿ ಬಿಜ್ಜಳನನ್ನು ಹತ್ಯೆ ಮಾಡಿದ್ದು ಜಗದೇವ ಮತ್ತು ಮಲ್ಲಿಬೊಮ್ಮಯ್ಯ ಅಲ್ಲ ಎಂದು ಶಾಸನಾಧಾರಗಳಿಂದ ಇಲ್ಲಿ ನಿರೂಪಿಸಲಾಗಿದ್ದು ಇಂತಹ ಹತ್ತು ಹಲವು ವಿಸ್ಮಯ ವಿಷಯಗಳು ಈ ಕೃತಿಯೊಳಗಿದ್ದು ಸಾಮಾನ್ಯ ಓದುಗರಿಗೆ ಕುತೂಹಲಕಾರಿ ಆದರೆ ವಿದ್ವಾಂಸರಲ್ಲಿ ಚರ್ಚೆ ಹುಟ್ಟು ಹಾಕುವುದರಲ್ಲಿ ಸಂದೇಹವಿಲ್ಲ


ಶ್ರೀಶೈಲ ಜಾಲಿಹಾಳ

Don`t copy text!