ಹರಕೆ
ಜಗನ್ಮಾತೆಯ ಶಕ್ತಿ
ಹೆತ್ತಬ್ಬೆಯ ಚೈತನ್ಯ
ತುಂಬಿ ಇಂಬುಗೊಂಡು
ವಂಶ ಬೀಜ ಫಲಿಸಲು
ಮೂಡಿ ಬಂದ ಮಗಳೇ
ನೀ ಮನುಕುಲದ ಬೇರು..
ಅಂಧ-ಶ್ರದ್ಧೆಗಳ ಸಂಕೋಲೆ
ಹರಿದೊಗೆದು ಎದ್ದೇಳು
ಯುಗ ಯುಗದ ಮೂಢ-
-ನಂಬಿಕೆಯ ತೆರೆ ಸರಿಸಿ
ಇಡು ದೃಢ ಹೆಜ್ಜೆ ಗಳ
ಜಗದ ವಿಶಾಲಬಯಲೊಳು..
ಜ್ಞಾನದೀಪದ ಬೆಳಕು
ತೋರಲಿ ನಿನ್ನ ನಿಜಪಥವ
ಸ್ಥಾಪಿಸು ದಿಟ್ಟ ಅಸ್ತಿತ್ವವ
ಅರಿವಿನಾ ಕುರುಹಾಗಿ..
ಕೇಳು ಬಾಲೆ ಒಡಲ ಕುಡಿಯೆ
ಧೈರ್ಯ-ಸ್ಥೈರ್ಯಗಳ ಗಣಿಯಾಗಿ
ಬೆಳೆದು ಬಾಳ ಬೆಳಕಾಗು
ಇದು ನನ್ನ ಹರಕೆ ಅನವರತ ನಿನಗೆ…
ರಚನೆ: ಹಮೀದಾಬೇಗಂ ದೇಸಾಯಿ ಸಂಕೇಶ್ವರ.