ಗಣರಾಜ್ಯೋತ್ಸವ

ಗಣರಾಜ್ಯೋತ್ಸವ

( ಪ್ರಜಾಪ್ರಭುತ್ವ)

ಜನವರಿ ಇಪ್ಪತ್ತಾರು ಗಣರಾಜ್ಯೋತ್ಸವ
ಪ್ರಜಾಪ್ರಭುತ್ವದ ಸಂಭ್ರಮಾಚರಣೆ
ಎಲ್ಲೆಡೆಯೂ ಹರುಷ ಉಲ್ಲಾಸೋತ್ಸಾಹ
ಸಂಚಾರವಿಲ್ಲದ ರಸ್ತೆಯ ಪೊದೆಯಲಿ
ಮಹಿಳೆಯ ಅರೆನಗ್ನ ಶವ..
ಕಾಮುಕರ ಪ್ರಜಾಪ್ರಭುತ್ವದ ಜೈಕಾರ..

ಶಾಲೆ ಕಾಲೇಜು ಕಛೇರಿಗಳಲಿ
ಎಳೆಯ, ಹರೆಯದ ಹೆಣ್ಣುಗಳಿಗೆ ಕಿರುಕಳ ;
ಅಪಹರಣ,ಶೀಲಹರಣ,ಬರ್ಬರಹತ್ಯೆಗಳು..
ಯಾರಿಗೆ ಪ್ರಜಾಪ್ರಭುತ್ವ…..

ಗೆದ್ದಲು ಕಟ್ಟಿವೆ ಸಂವಿಧಾನದ ಹಕ್ಕುಗಳು
ತುಕ್ಕು ಹಿಡಿದಿವೆ ನ್ಯಾಯದ ಕಾನೂನುಗಳು
ಸುತ್ತಲೂ ಅನ್ಯಾಯ ಗಹಗಹಿಸಿ ನಗುತಿವೆ
ಭ್ರಷ್ಟ ಹಗಲುಗಳ್ಳರ ಜೇಬುಗಳು ತುಂಬಿವೆ
ಇದು ಸ್ವತಂತ್ರ ಭಾರತದ ಪ್ರಜಾಪ್ರಭುತ್ವ….

ಹೆಣ್ಣಿನ ಪ್ರತಿಭೆಯ ಚಿಗುರನ್ನು ಚಿವುಟಿ
ಅಟ್ಟಹಾಸದಿ ಮೆರೆಯುವ ಪುರುಷೋತ್ತಮರೇ
ಬಿಡಿ ನಿಮ್ಮ ಒಣ ಪ್ರತಿಷ್ಠೆಯ
ಸಮಾನತೆಯಲಿ ಸಮರಸದಿ ಬಾಳಲು
ಬನ್ನಿ ಇಂದೇ ಪಣ ತೊಡೋಣ..


ಶ್ರೀಮತಿ ಹಮೀದಾಬೇಗಂ ದೇಸಾಯಿ ( ಕನ್ನಡತಿ)
@ಸಂಕೇಶ್ವರ- 591313.
ಬೆಳಗಾವಿ ಜಿಲ್ಲೆ.
ಮೋ. ಸಂಖ್ಯೆ: 9449442051
7676742174

Don`t copy text!